ಮಾಜಿ ಫುಟ್‍ಬಾಲ್ ಆಟಗಾರ ಭೌಮಿಕ್ ನಿಧನ

ಕೋಲ್ಕತಾ,ಜ.22- ಭಾರತದ ಮಾಜಿ ಫುಟ್‍ಬಾಲ್ ಆಟಗಾರ ಸುಭಾಸ್ ಭೌಮಿಕ್ ಅವರು ದೀರ್ಘಕಾಲದ ಅನಾರೋಗ್ಯದಿಂದ ನಗರದ ಆಸ್ಪತ್ರೆಯೊಂದರಲ್ಲಿ ಇಂದು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಭೋಂಬೋಲ್‍ದಾ ಎಂದು ಜನಪ್ರಿಯರಾಗಿದ್ದ ಭೌಮಿಕ್ (72) ಮಧುಮೇಹ ಹಾಗೂ ಮೂತ್ರಪಿಂಡ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ನಸುಕಿನ ಜಾವ 3-30ರಲ್ಲಿ ಅಸುನೀಗಿದರು ಎಂದು ಮೂಲಗಳು ಹೇಳಿವೆ. ಸ್ಟ್ರೈಕರ್ ಆಗಿದ್ದ ಭೌಮಿಕ ಈಸ್ಟ್ ಬೆಂಗಾಲ್, ಮೋಹನ್ ಬಾಗನ್ ಪರವಾಗಿ ಆಡಿದ್ದರು ಮತ್ತು ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಸಿದ್ದರು. ಅವರು ಓರ್ವ ಯಶಸ್ವೀ […]