ಕೃಷಿ ಪಂಪ್ ಸೆಟ್‍ಗಳಿಗೆ ಹಗಲು ವೇಳೆ 4 ಗಂಟೆ 3 ಪೇಸ್ ವಿದ್ಯುತ್ ನೀಡಲು ಒತ್ತಾಯ
ಬೆಂಗಳೂರು,ಮಾ.10- ಕೃಷಿ ಪಂಪ್ ಸೆಟ್‍ಗಳಿಗೆ ಹಗಲು ವೇಳೆ ನಾಲ್ಕು ಗಂಟೆ 3 ಪೇಸ್ ವಿದ್ಯುತ್ ಸರಬರಾಜು ಮಾಡಲು ಪಕ್ಷ ಭೇದ ಮರೆತು ಒತ್ತಾಯಿಸಿದ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅವರ ಪ್ರಶ್ನೆಗೆ ಇಂಧನ ಸಚಿವ ವಿ.ಸುನೀಲ್‍ಕುಮಾರ್ ಅವರ ಪರವಾಗಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಉತ್ತರಿಸುತ್ತಿದ್ದಾಗ ಹಲವು ಸದಸ್ಯರು ಹಗಲಿನಲ್ಲಿ 4 ಗಂಟೆ, ರಾತ್ರಿ 3 ಗಂಟೆ ವಿದ್ಯುತ್ ಒದಗಿಸುವಂತೆ ಒತ್ತಾಯಿಸಿದರು. ವೆಂಕಟರಮಣಯ್ಯ ಮಾತನಾಡಿ, ರಾತ್ರಿ ನಾಲ್ಕು ಗಂಟೆ, ಹಗಲಿನಲ್ಲಿ 3 ಗಂಟೆ ವಿದ್ಯುತ್ […]
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ: ಹೆಚ್‌ಡಿಕೆ
ಬೆಂಗಳೂರು,ಮಾ.9-ರಾಜಧಾನಿ ಬೆಂಗಳೂರ ಸೇರಿದಂತೆ ಭಾಗಗಳಲ್ಲಿ ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ನದಿನೀರು ಯೋಜನೆಯನ್ನು ತಮಿಳುನಾಡಿನ ಒಪ್ಪಿಗೆ ಇಲ್ಲದೆ ರಾಜ್ಯ ಸರ್ಕಾರ ಇಚ್ಛಾಸಕ್ತಿ ಪ್ರದರ್ಶಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ನು ಅನುಷ್ಠಾನ ಮಾಡಲು ತಮಿಳುನಾಡು ಇಲ್ಲವೇ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ. ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆದು ಯೋಜನೆಯನ್ನು ಅನುಷ್ಠಾನ ಮಾಡಬೇಕು. ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಅವರು ಹೆಚ್ಚಿನ ಶ್ರಮ ವಹಿಸಿದರೆ ಇದು ಸಾಧ್ಯ ಎಂದು ಸಲಹೆ […]
ಚರ್ಚೆ ವೇಳೆ ಸಚಿವರು, ಅಧಿಕಾರಿಗಳು ಹಾಜರಿಲ್ಲ : ಜೆಡಿಎಸ್ ಶಾಸಕರ ಆಕ್ಷೇಪ
ಬೆಂಗಳೂರು,ಮಾ.9- ಅಯವ್ಯಯದ ಮೇಲೆ ಚರ್ಚೆ ನಡೆಯುವಾಗ ಸಚಿವರು, ಅಧಿಕಾರಿಗಳು ಹಾಜರಿಲ್ಲ. ಈ ರೀತಿಯಾದರೆ ಸದನ ಏಕೆ ನಡೆಸಬೇಕು ಎಂದು ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿಂದು ಆಕ್ಷೇಪಿಸಿದರು. 2022-23ನೇ ಸಾಲಿನ ಆಯವ್ಯಯದ ಚರ್ಚೆ ಆರಂಭಿಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅವಕಾಶ ನೀಡಿದರು. ಕುಮಾರಸ್ವಾಮಿ ಮಾತನಾಡಲು ಎದ್ದು ನಿಂತಾಗ ಸಚಿವರು ಹಾಗೂ ಅಧಿಕಾರಿಗಳ ಹಾಜರಾತಿ ಕೊರತೆ ಎದ್ದು ಕಾಣುತ್ತಿತ್ತು. ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಅನ್ನದಾನಿ, ಸಚಿವರು ಇಲ್ಲ , ಅಧಿಕಾರಿಗಳೂ ಇಲ್ಲ. ನಾವು ಮಾತನಾಡುವುದು […]