ಶಿವಮೊಗ್ಗ ಕ್ಷೇತ್ರದಿಂದ ಆಯನೂರು ಕಣಕ್ಕೆ..?

ಬೆಂಗಳೂರು, ಮಾ.23- ವಿಧಾನ ಸಭೆ ಚುನಾವಣೆಗೆ ಶಿವಮೊಗ್ಗ ನಗರದಿಂದ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲದ ನಡುವೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಆಯನೂರು ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದೆ. ಹಾಗಾಗಿ ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೆ.ಈ.ಕಾಂತೇಶ್ ಅವರು ತಮ್ಮ ಉತ್ತರಾಧಿಕಾರಿ […]
ವಿಧಾನಸೌಧ ಮೆಟ್ಟಿಲೇರಲು ಹಲವು ಬಿಬಿಎಂಪಿ ಮಾಜಿ ಸದಸ್ಯರ ಭರ್ಜರಿ ತಯಾರಿ

ಬೆಂಗಳೂರು,ಮಾ.23- ಸಕಾಲಕ್ಕೆ ಬಿಬಿಎಂಪಿ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ಮಾಜಿ ಕಾರ್ಪೊರೇಟರ್ ಗಳು ವಿಧಾನಸೌಧದತ್ತ ಮುಖ ಮಾಡಿದ್ದಾರೆ.ಬಿಬಿಎಂಪಿಯ 20ಕ್ಕೂ ಹೆಚ್ಚು ಮಾಜಿ ಕಾರ್ಪೊರೇಟರ್ ಗಳು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪ ಸುವ ತರಾತುರಿಯಲ್ಲಿದ್ದು, ತಮಗೆ ಅನುಕೂಲಕರವಾದ ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ತಮ್ಮ ಪಕ್ಷಗಳ ನಾಯಕರುಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಿಬಿಎಂಪಿ ಚುನಾಯಿತ ಪ್ರತಿನಿಗಳ ಅವ 2020ರ ಸೆಪ್ಟೆಂಬರ್ ನಲ್ಲಿ ಅಂತ್ಯವಾಗಿದೆ. ಅಂದಿನಿಂದ ಸ್ಥಳೀಯರು ಶಾಸಕರು ಹೇಳುವ ಕೆಲಸ ಮಾಡುತ್ತಾ, ಸ್ವಂತ ಹಣದಲ್ಲಿ ಜನ ಸೇವೆ ಮಾಡುವಂತಾಗಿದೆ. […]
ಪ್ರಚಾರಕ್ಕಾಗಿ ಸಿದ್ದರಾಮಯ್ಯ ಗಿಮಿಕ್ ಮಾಡ್ತಿದ್ದಾರೆ : ಬಿಎಸ್ವೈ ಟಾಂಗ್

ಬೆಂಗಳೂರು, ಮಾ.23- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧೆ ಮಾಡಬೇಕೆಂಬುದು ಯಾರಲ್ಲೂ ಗೊಂದಲ ಉಂಟಾಗಿಲ್ಲ. ಇದು ಕೇವಲ ಪ್ರಚಾರ ಪಡೆಯುವ ಗಿಮಿಕ್ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ, ವರುಣ, ಕಡೂರು, ಕುಷ್ಟಗಿ ಹೀಗೆ ನಾನಾಕಡೆ ಹೆಸರು ಹೇಳಿಕೊಂಡು ಸಿದ್ದರಾಮಯ್ಯ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆಯೇ ಹೊರತು ಅವರ ಸ್ಪರ್ಧೆ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ರೋಷನ್ ಬೇಗ್ ಪುತ್ರ ರುಮಾನ್ ಬೇಗ್ ಬಿಜೆಪಿಗೆ ಸುಮ್ಮನೆ ಜನರ ಮಧ್ಯೆ […]
ಎ.ಎಸ್.ಪಾಟೀಲ್ ನಡಹಳ್ಳಿಗೆ ಟಿಕೆಟ್ ಪಕ್ಕಾ, ಗೆಲುವು ಕೂಡ ನಿಶ್ಚಿತ : ಸಿಎಂ

ಬೆಂಗಳೂರು, ಮಾ.21- ಕಳೆದ 72 ವರ್ಷಗಳಿಂದ ನೀರು ತರಲು ಆಗದವರನ್ನು ನಾಯಕರು ಎನ್ನಬೇಕೆ ಎಂದು ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಾ ಪ್ರಹಾರ ನಡೆಸಿದ್ದಾರೆ. ಮುದ್ದೇಬಿಹಾರಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 130 ಕೋಟಿ ಜನರಿಗೆ ನೀರು ಕೊಡುವ ಸಾಹಸದ ಮಾಡಿದ್ದೇವೆ. ಆದರೆ, ಕೇವಲ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಲೇ ಕಾಂಗ್ರೆಸ್‍ನವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಜಲಜೀವನ್ ಮಿಷನ್ ಮೂಲಕ […]
BREAKING: ನಾಳೆ ಕಾಂಗ್ರೆಸ್ ಕಲಿಗಳ ಮೊದಲ ಪಟ್ಟಿ ಬಿಡುಗಡೆ..?

ಬೆಂಗಳೂರು,ಮಾ.21- ಹಲವು ಜನಪರ ಯೋಜನೆಗಳ ಭರವಸೆ ಮೂಲಕ ಜನೋತ್ಸಾಹದಲ್ಲಿರುವ ಕಾಂಗ್ರೆಸ್ ನಾಳೆ ನೂರಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಮೂಲಕ ಚುನಾವಣಾ ರಣಾಂಗಣಕ್ಕೆ ಭಾರೀ ವೇಗದಲ್ಲಿ ಪ್ರವೇಶ ಪಡೆಯಲು ಮುಂದಾಗಿದೆ. ಕಳೆದ ಮೂರು ತಿಂಗಳಿನಿಂದ ಹಲವು ಸುತ್ತಿನ ಕಸರತ್ತನ್ನು ನಡೆಸಿರುವ ಕಾಂಗ್ರೆಸ್ ಪಂಚಾಯತ್ ಮಟ್ಟದಿಂದ ಅಭಿಪ್ರಾಯ ಸಂಗ್ರಹಿಸಿದೆ. ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯಗಳನ್ನು ಕ್ರೋಢಿಕರಿಸಿದೆ. ರಾಜ್ಯ ಮಟ್ಟದಲ್ಲಿ ಚುನಾವಣಾ ಸಮಿತಿ, ರಾಷ್ಟ್ರೀಯ ಮಟ್ಟದ ಟಿಕೆಟ್ ಪರಿಶೀಲನಾ ಸಮಿತಿಗಳು 13ಕ್ಕೂ ಹೆಚ್ಚು ಸಭೆಗಳನ್ನು ನಡೆಸಿವೆ. […]
ಕಾಂಗ್ರೆಸ್ 4ನೇ ಗ್ಯಾರಂಟಿ ಕುರಿತು ಯಡಿಯೂರಪ್ಪ ಲೇವಡಿ

ಬೆಂಗಳೂರು,ಮಾ.21- ಪದವೀಧರರು ಹಾಗೂ ಡಿಪ್ಲೊಮಾ ಮಾಡಿದವರಿಗೆ ಮಾಶಾಸನ ನೀಡುವ ಕಾಂಗ್ರೆಸ್ ಪಕ್ಷದ 4ನೇ ಗ್ಯಾರಂಟಿ ಘೋಷಣೆಗೆ ಯಾವುದೇ ಬೆಲೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಎಲ್ಲಿದೆ? ಯಾವ ರಾಜ್ಯದಲ್ಲಿ ಅನುಷ್ಠಾನ ಮಾಡಲಾಗಿದೆ, ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದವರೇ ಘೋಷಣೆ ಮಾಡಿದ ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲ.ಹೀಗಾಗಿ 4ನೇ ಗ್ಯಾರಂಟಿ ಯೋಜನೆಗೆ ಬೆಲೆ ಇಲ್ಲ ಎಂದು ಕುಹುಕವಾಡಿದರು. ಈ ಯೋಜನೆ ಅನುಷ್ಠಾನ ಮಾಡಲು ಸಾವಿರಾರು ಕೋಟಿ […]
ಬಿಜೆಪಿಗೆ ಅನೇಕ ಕ್ಷೇತ್ರಗಳಲ್ಲಿ ಕಾಡುತ್ತಿದೆ ಆಕಾಂಕ್ಷಿಗಳ ಅತೃಪ್ತಿ ಭಯ

ಬೆಂಗಳೂರು,ಮಾ.21-ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿ ಮತ್ತೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಆಡಳಿತಾರೂಢ ಬಿಜೆಪಿಗೆ ಅನೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳೇ ತೊಡರುಗಾಲಾಗಿ ಪರಿಣಮಿಸಿದ್ದಾರೆ. ಸುಮಾರು 75ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ 2ರಿಂದ 5ಕ್ಕೂ ಹೆಚ್ಚು ಆಕಾಂಕ್ಷಿಗಳಿರುವುದರಿಂದ ಯಾರಿಗೆ ಟಿಕೆಟ್ ಕೊಟ್ಟರೂ ಅವಕಾಶ ವಂಚಿತರು ಪಕ್ಷದ ವಿರುದ್ಧ ತಿರುಗಿ ಬೀಳಬಹುದೆಂಬ ಆತಂಕ ಎದುರಾಗಿದೆ.ಈಗಾಗಲೇ ಜೆಡಿಎಸ್ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದರೆ ಕಾಂಗ್ರೆಸ್ ಯಾವುದೇ ಕ್ಷಣದಲ್ಲೂ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಂಭವವಿದೆ. ಬಿಜೆಪಿ ಕೂಡ ಹಾಲಿ ಶಾಸಕರು ಮತ್ತು […]
ಕಾಂಗ್ರೆಸ್‍ನ ಗ್ಯಾರಂಟಿ ಕಾರ್ಡ್ ನಂಬಬೇಡಿ, ಅದು ಡೂಪ್ಲಿಕೇಟ್ :ಎಚ್‍ಡಿಕೆ

ತಿ.ನರಸೀಪುರ, ಮಾ.21 -ಕಾಂಗ್ರೆಸ್ ಪಕ್ಷದವರು ನೀಡುತ್ತಿರುವುದು ಗ್ಯಾರಂಟಿ ಕಾರ್ಡ್ ಅಲ್ಲ, ಅದು ಡೂಪ್ಲಿಕೇಟ್ ಕಾರ್ಡ್ ಎಂದು ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ತಾಲೂಕಿನ ಬನ್ನೂರು ಪಟ್ಟಣದ ಫುಟ್ಬಾಲ್ ಮೈದಾನದಲ್ಲಿ ಆಯೋಜಿಸಿದ್ದ ಪಂಚರತ್ನ ಯಾತ್ರೆಯ ಸಮಾವೇಶದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದವರು ಮತದಾರನ ಆಧಾರ್ ಕಾರ್ಡ್ ಪಡೆದು ಅದ್ಯಾವುದೋ ಕೆಲಸಕ್ಕೆ ಬಾರದ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಅದು ಗ್ಯಾರಂಟಿ ಕಾರ್ಡ್ ಅಲ್ಲ ಅದು ಡೂಪ್ಲಿಕೇಟ್ ಕಾರ್ಡ್ ಚುನಾವಣೆಯಲ್ಲಿ ಮತಗಳಿಸಲು ಅವರು ಮಾಡುತ್ತಿರುವ ಗಿಮಿಕ. ಈ ಬಗ್ಗೆ […]
ಎಲೆಕ್ಷನ್ ‘ಹಬ್ಬ’ : ಭರ್ಜರಿ ಕಾಂಚಾಣ ಕುಣಿತ, ಹಣದ ಹೊಳೆ, ಗಿಫ್ಟ್ ಸುರಿಮಳೆ

ಬೆಂಗಳೂರು,ಮಾ.21-ದೇಶದ ಮುಂದಿನ ಮಹಾಚುನಾವಣೆಗೆ ಉಪಪಂದ್ಯ ಎಂದೇ ಬಿಂಬಿತವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಗೆ ದಿನಗಣನೆ ಆರಂಭಗೊಂಡಿರುವ ನಡುವೆಯೇ ಮತದಾರರ ಪ್ರಭುಗಳಿಗೆ ಲಕ್ಷ್ಮಿ ಕಟಾಕ್ಷ ಒಲಿದು ಬರುವ ಸಾಧ್ಯತೆಗಳಿವೆ. ಹಿಂದೆಂದೂ ಕಾಣದಂತಹ ಚುನಾವಣಾ ಕಣ ರಂಗೇರಲಿದ್ದು, ಕುಣಿಯುವ ಕಾಂಚಾಣ ಕುಣಿತಕ್ಕೆ ರಣರಂಗ ಸಜ್ಜಾಗಿದೆ. ಒಂದೆಡೆ ಕೋಟಿ ಕುಳಗಳು ಕಣಕ್ಕಿಳಿಯುವುದರಿಂದ ಮತ ಕಣ ರಂಗು ಪಡೆಯಲಿದೆ.ಚುನಾವಣೆ ಘೋಷಣೆ ಮುನ್ನವೇ ಜನರಿಗೆ ಉಡುಗೊರೆಗಳನ್ನು ನೀಡಿ ಖುಷಿಪಡಿಸಿರುವ ರಾಜಕೀಯ ಪಕ್ಷಗಳ ನಾಯಕರು, ಈಗ ತಮ್ಮ ಕೊನೆಯ ಆಟಕ್ಕೆ ಸಜ್ಜುಗೊಳುತ್ತಿದ್ದಾರೆ. ಮುಂದಿನ ವಾರ ಚುನಾವಣೆ […]
ಚುನಾವಣಾ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ RSS ಮತ್ತಷ್ಟು ಸಕ್ರಿಯ

ಬೆಂಗಳೂರು, ಮಾ.17- ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಳೆದ ಕೆಲವು ತಿಂಗಳುಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕದಲ್ಲಿ ತನ್ನ ಚಟುವಟಿಕೆಯನ್ನು ತೀವ್ರಗೊಳಿಸಿದೆ. ಇದು ರಾಜ್ಯದಲ್ಲಿ ಅದರ ವ್ಯಾಪ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಒಳಗೊಂಡಿದೆ. ವಿಶೇಷವಾಗಿ ಹಿಂದುತ್ವ ಶಕ್ತಿಗಳ ಬಲವರ್ಧನೆ ಇರುವ ಪ್ರದೇಶಗಳಲ್ಲಿ ಜೊತೆಗೆ ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ಕಾಯ್ದುಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆರ್‍ಎಸ್‍ಎಸ್‍ಗೆ ಕರ್ನಾಟಕ ದಕ್ಷಿಣದ ಸಾಂಸ್ಥಿಕ ವಲಯ ಎಂದು ಕರೆಯುವ ರಾಜ್ಯದ ದಕ್ಷಿಣ ಭಾಗವಾಗಿದೆ. ಇಲ್ಲಿ 355ಕ್ಕೂ ಹೆಚ್ಚು ಸಮರ್ಪಿತ ವಿಸ್ತಾರಕ್‍ಗಳು ಸಂಪರ್ಕ ಮತ್ತು ವಿಸ್ತರಣೆ ಕಾರ್ಯಕ್ರಮವನ್ನು […]