ಉಡುಪು ತಯಾರಿಕ ಘಟಕದಲ್ಲಿ ಅನಿಲ ಸೋರಿಕೆ : 87 ನೌಕರರು ಅಸ್ವಸ್ಥ

ಹೈದರಾಬಾಎರ್,ಆ.3- ಉಡುಪು ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಾಗಿ 87 ಮಂದಿ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಆಂಧ್ರಪ್ರೇಶದಲ್ಲಿ ನಡೆದಿದೆ. ಅಚ್ಯುತಪುರಂ ಜಿಲ್ಲೆಯಲ್ಲಿರುವ ಬ್ರಾಂಡಿಕ್ಸ್ ವಿಶೇಷ ಆರ್ಥಿಕ ವಲಯ ಉಡುಪು ತಯಾರಿಕಾ ಘಟಕದಲ್ಲಿ ಈ ಘಟನೆನಡೆದಿದೆ. ಪ್ರಾರಂಭದಲ್ಲಿ ಕೆಲವು ಮಹಿಳಾ ಉದ್ಯೋಗಿಗಳು ವಾಕರಿಕೆ, ವಾಂತಿ ಕಾಣಿಸಿಕೊಂಡಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಸ್ವಸ್ಥಗೊಂಡ 87 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಅಚ್ಚುತಪುರಂನಲ್ಲಿರುವ ಗಾರ್ಮೆಂಟ್ಸ್‍ನಲ್ಲಿ ಅನಿಲ ಸೋರಿಕೆಯಾಗಿ ಹಲವು ಮಹಿಳೆಯರು […]