ಶ್ರೀನಗರದಲ್ಲಿರುವ ಭಯೋತ್ಪಾದಕ ಮುಷ್ತಾಕ್ ಮನೆ ಜಪ್ತಿ

ಶ್ರೀನಗರ, ಮಾ .2 -ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಹಟ್ಟಾ ಪ್ರದೇಶದಲಿರುವ ಭಯೋತ್ಪಾದಕ ಮುಷ್ತಾಕ್ ಅಹ್ಮದ್ ಜರ್ಗರ್ ಅಲಿಯಾಸ್ ಲಾಟ್ರಾಮ್ ಅವರ ಮನೆಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮನೆಗೆ ಸೂಚನಾ ಫಲಕವನ್ನು ಪೊಲೀಸ್ ಸಿಬ್ಬಂದಿ ಅಂಟಿಸಿದ್ದಾರೆ. ಪರಾರಿಯಾಗಿರು ಉಗ್ರ ಲಾಟ್ರಾಮ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ 540 ಚದರ ಅಡಿ ವಿಸ್ತೀರ್ಣದ ಪ್ಲಾಟ್‍ನಲ್ಲಿರುವ ಕಟ್ಟಡವನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಜಪ್ತಿಮಾಡಲಾಗಿದೆ. ಬಿಗ್ ಬಿ ಹಾಗೂ […]