ಬಾಡಿಗೆಗೆ ಕಾರುಗಳನ್ನು ಅಟ್ಯಾಚ್ ಮಾಡಿಸಿಕೊಂಡು ಅಂತರಾಜ್ಯಗಳಿಗೆ ಮಾರುತ್ತಿದ್ದ ವಂಚಕರು ಅಂದರ್

ಬೆಂಗಳೂರು, ಜ.8- ಟ್ರಾವೆಲ್ಸ್ ಹೆಸರಲ್ಲಿ ಮಾಲೀಕರಿಂದ ಕಾರುಗಳನ್ನು ಬಾಡಿಗೆಗೆಂದು ಅಟ್ಯಾಚ್ ಮಾಡಿಸಿಕೊಂಡು ಅಂತರ್‍ರಾಜ್ಯಗಳಿಗೆ ಮಾರಾಟ ಮಾಡಿದ್ದ ನಾಲ್ವರು ವಂಚಕರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ 67 ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಾಗವಾರದ ನಿವಾಸಿ ಶಿವಕುಮಾರ್ ಹಾಗೂ ಸಹಚರರಾದ ಹಾಸನ ಮೂಲದ ಕೃಷ್ಣೇಗೌಡ, ಶ್ರೀಕಾಂತ್ ಮತ್ತು ಗೋರಿಪಾಳ್ಯದ ಅಪ್ಸರ್ ಬಂಧಿತ ವಂಚಕರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಐದು ಮಂದಿ ತಲೆಮರೆಸಿಕೊಂಡಿದ್ದು, ಅವರ ಶೋಧಕಾರ್ಯ ಮುಂದುವರೆದಿದೆ. ಅಲ್ಲದೆ, ಉಳಿದ 20 ಕಾರುಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಾಗಲಗುಂಟೆಯಲ್ಲಿ ಪ್ರಮುಖ […]