1700 ಅಡಿ ಎತ್ತರದ ಗಡಾಯಿಕಲ್ಲು ಏರಲಿರುವ ಜ್ಯೋತಿರಾಜ್

ಬೆಳ್ತಂಗಡಿ, ಫೆ.11- ಚಿತ್ರದುರ್ಗದ ಕಲ್ಲಿನ ಕೋಟೆ, ಜೋಗ್ ಫಾಲ್ಸ್ ಪ್ರದೇಶ ಸೇರಿದಂತೆ ಅಪಾಯಕಾರಿ ಪ್ರದೇಶಗಳನ್ನು ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಬರಿಗೈಯಿಂದಲೇ ಏರುವ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಭಾನುವಾರ 1700 ಅಡಿ ಎತ್ತರದ ಗಡಾಯಿ ಕಲ್ಲನ್ನು ಏರಲಿದ್ದಾರೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿರುವ ಗಡಾಯಿಕಲ್ಲು, ನರಸಿಂಹ ಘಡ,ಜಮಲಾಬಾದ್ ಎಂದು ಕೂಡ ಹೆಸರುವಾಸಿಯಾಗಿದೆ. ಹಲವಾರು ಪರ್ವತಗಳು, ಬೆಟ್ಟ, ಕಟ್ಟಡಗಳನ್ನು ಏರಿರುವ ಜ್ಯೋತಿರಾಜï, ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಮ್ಮ ಸಾಹಸ ತೋರಲು ಮುಂದಾಗಿದ್ದಾರೆ. ಇದಕ್ಕಾಗಿ ಇವರ ಜತೆ ಎಂಟು […]

ಲೈಂಗಿಕ ಕಿರುಕುಳ: ಹರ್ಯಾಣದ ಸಚಿವ ಸಂದೀಪ್ ಸಿಂಗ್ ವಿರುದ್ಧ ಕ್ರಿಮಿನಲ್ ಕೇಸ್

ಚಂಡಿಘಡ್, ಜ.1- ಮಹಿಳಾ ತರಬೇತುದಾರರ ಜೊತೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ಹರ್ಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. 36 ವರ್ಷದ ಸಂದೀಪ್ ಸಿಂಗ್ ಭಾರತೀಯ ಹಾಕಿ ತಂಡದ ಮಾಜಿ ನಾಯಕರಾಗಿದ್ದು, ಕುರುಕ್ಷೇತ್ರದ ಪೆಹೋವಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ, ಸಚಿವರಾಗಿದ್ದಾರೆ. ಅವರ ವಿರುದ್ಧ ಈಗ ಚಂಡಿಘಡದ ಸೆಕ್ಟರ್ 26ರ ಪೆÇಲೀಸ್ ಠಾಣೆಯಲ್ಲಿ ಸಚಿವರ ವಿರುದ್ಧ ಸೆಕ್ಷನ್ 354 (ಕ್ರಿಮಿನಲ್ ಉದ್ದೇಶದಿಂದ ಬಲವಂತವಾಗಿ ಮಹಿಳೆಯ ಗೌರವಕ್ಕೆ ಧಕ್ಕೆ […]

RH-200 ಸೌಂಡಿಂಗ್ ರಾಕೆಟ್‍ನ ಸತತ 200ನೇ ಯಶಸ್ವಿ ಉಡಾವಣೆ

ಬೆಂಗಳೂರು, ನ.24 -ಇಸ್ರೋದ ಬಹುಮುಖ ಸೌಂಡಿಂಗ್ ರಾಕೆಟ್ RH-200 ತಿರುವನಂತಪುರಂನ ತುಂಬಾ ತೀರದಿಂದ ಸತತ 200 ನೇ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದೆ. ಇದಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಇತರೆ ಅಧಿಕಾರಿಗ ಸಾಕ್ಷಿಯಾದರು. ಭಾರತೀಯ ಸೌಂಡಿಂಗ್ ರಾಕೆಟ್‍ಗಳನ್ನು ಪವನಶಾಸ್ತ್ರ, ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಗಳನ್ನು ನಡೆಸಲು ಮತ್ತು ವೈಜ್ಞಾನಿಕ ಸಮುದಾಯಕ್ಕೆ ವಿಶೇಷ ಸಾಧನಗಳಾಗಿ ಬಳಸಲಾಗುತ್ತದೆ […]

ಶಿವಮೊಗ್ಗದಲ್ಲಿ ನಿಷೇಧಾಜ್ಞೆ ನಡುವೆಯೂ ಮತ್ತೊಂದು ಹತ್ಯೆಗೆ ಯತ್ನ

ಶಿವಮೊಗ್ಗ,ಆ.16- ನಿಷೇಧಾಜ್ಞೆ ನಡುವೆಯೂ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಮೂವರ ಗುಂಪೊಂದು ಚಾಕುವಿನಿಂದ ಇರಿಯಲು ಯತ್ನಿಸಿರುವ ಘಟನೆ ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೂದಲೆಳೆಯ ಅಂತರದಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್(28) ಪಾರಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪೊಲೀಸರ ಹೈ ಅಲರ್ಟ್, ನಿಷೇಧಾಜ್ಞೆ ನಡುವೆಯೂ ಗುಂಪೊಂದು ಬಾಲಬಿಚ್ಚಿದ್ದು, ಇಂದು ಬೆಳಗ್ಗೆ ಭದ್ರಾವತಿಯ ನೆಹರು ಬಡಾವಣೆಯಲ್ಲಿ ಗಲಾಟೆ ನಡೆದಿದ್ದು, ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಸುನೀಲ್ ಎಂಬಾತನ ಮೇಲೆ ಡಿಚ್ಚಿ ಅಲಿಯಾಸ್ ಮುಬಾರಕ್ ಸೇರಿದಂತೆ […]