ದೇಶದ ಜನರ ನಡುವೆ ಬಿರುಕು ಮೂಡಿಸುವ ಯತ್ನಗಳು ನಡೆಯುತ್ತಿವೆ, ಎಚ್ಚರದಿಂದಿರಿ : ಮೋದಿ

ನವದೆಹಲಿ,ಜ.29-ಬಿಬಿಸಿ ಸಾಕ್ಷ್ಯಚಿತ್ರದಂತೆ ಒಂದಲ್ಲ ಒಂದು ನೆಪ ಹೂಡಿ ದೇಶದ ಜನರ ನಡುವೆ ಬಿರುಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಆದರೆ ಅಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿ ಕ್ಯಾಂಟ್‍ನ ಕರಿಯಪ್ಪ ಮೈದಾನದಲ್ಲಿ ನಡೆದ ಎನ್‍ಸಿಸಿ ರ್ಯಾಲಿಯಲ್ಲಿ ಮಾತನಾಡಿದ ಅವರು ಭಾರತವು ಶ್ರೇಷ್ಠತೆಯನ್ನು ಸಾಧಿಸಲು ಏಕತೆಯ ಮಂತ್ರವೊಂದೇ ಮಾರ್ಗವಾಗಿದೆ ಎಂದು ಹೇಳಿದರು. ದೇಶವನ್ನು ಒಡೆಯಲು ಹಲವು ಕಾರಣಗಳನ್ನು ಹುಡುಕಲಾಗುತ್ತಿದೆ. ನಾನಾ ವಿಷಯಗಳನ್ನು ಹೊರ ತೆಗೆಯುವ ಮೂಲಕ ಭಾರತ ಮಾತೆಯ ಮಕ್ಕಳ ನಡುವಿನಲ್ಲಿ ಬಿರುಕು ಮೂಡಿಸುವ […]