ಬೆಂಗಳೂರಿಗರಿಗೆ ಸಿಹಿಸುದ್ದಿ, ಆ.15 ರಂದು ಬಿಎಂಟಿಸಿಯಲ್ಲಿ ಪ್ರಯಾಣ ಉಚಿತ

ಬೆಂಗಳೂರು, ಆ.11- ಬಿಎಂಟಿಸಿ ಪ್ರಯಾಣಿಕರಿಗೊಂದು ಸಿಹಿ ಸುದ್ದಿ. ಆ.15ರಂದು ನಗರದಾದ್ಯಂತ ಬಿಎಂಟಿಸಿ ಬಸ್‍ಗಳಲ್ಲಿ ಸಂಚರಿಸಿದರೆ ಟಿಕೆಟ್ ಖರೀದಿಸಬೇಕಾಗಿಲ್ಲ. ಉಚಿತವಾಗಿ ಪ್ರಯಾಣ ಮಾಡಬಹುದು. 75ನೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬಿಎಂಪಿಟಿ ಮಹತ್ವದ ಸೇವೆಯನ್ನು ಘೋಷಿಸಿದೆ. 15ರಂದು ಇಡೀ ದಿನ ಬೆಂಗಳೂರಿನಾದ್ಯಂತ 24 ಗಂಟೆ ಕಾಲ ಸಂಪೂರ್ಣ ಉಚಿತ ಸಂಚಾರವಿರುತ್ತದೆ. ಓಲ್ವೋ ಸೇರಿದಂತೆ ಎಲ್ಲ ಬಿಎಂಟಿಸಿ ಬಸ್‍ಗಳಲ್ಲೂ ಈ ಸೇವೆ ಅನ್ವಯವಾಗಲಿದೆ. ಇದರಿಂದ ಬಿಎಂಟಿಸಿಗೆ ಸುಮಾರು 3 ಕೋಟಿ ಹೊರೆ ಬೀಳಲಿದೆ. ಆದರೂ ಸಹ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ […]