ಔರಂಗಬಾದ್, ಉಸ್ಮಾನಬಾದ್ ಹೆಸರು ಬದಲಾವಣೆಗೆ ಕೇಂದ್ರ ಸಮ್ಮತಿ

ಮಹಾರಾಷ್ಟ್ರ,ಫೆ.25 – ಔರಂಗಬಾದ್ ನಗರವನ್ನು ಛತ್ರಪತಿ ಶಿವಾಜಿ ನಗರವೆಂದು ಮತ್ತು ಉಸ್ಮಾನಬಾದ್ ನಗರವನ್ನು ಧಾರಶಿವ್ ಎಂದು ಮರುನಾಮಕರಣ ಮಾಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೆಂದ್ರ ಪಡ್ನವೀಸ್ ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.ಔರಂಗಬಾದ್ ಎಂಬ ಹೆಸರು ಮೊಘಲ್ ರಾಜ ಔರಂಗಜೇಬನಿಂದ ಬಂದಿದ್ದು, ಉಸ್ಮಾನ ಬಾದ್ ಹೆಸರು ಕೂಡಾ ಮೊಘಲ್ ರಾಜನೊಬ್ಬನಿಂದ ಬಂದಿದೆ. ಈ ಹೆಸರುಗಳನ್ನು ಛತ್ರಪತಿ ಶಿವಾಜಿ ಮತ್ತು ಧಾರಶಿವ ಎಂದು ಬದಲಾಯಿಸಬೇಕೆಂದು ಬಲ ಪಂಥೀಯ ಸಂಘಟನೆಗಳು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದವು. […]

ಆದಿತ್ಯ ಠಾಕ್ರೆ ಕಾರಿನ ಮೇಲೆ ಕಲ್ಲು ತೂರಾಟ

ಔರಂಗಾಬಾದ್,ಫೆ.8- ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ. ಶಿವಸಂವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದನ್ನು ಶಿವಸೇನೆ ಮುಖಂಡ ಅಂಬಾದಾಸ್ ಧಾನ್ವೆ ಖಚಿತಪಡಿಸಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ನಿ ರಮಾಬಾಯಿ ಅಂಬೇಡ್ಕರ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಮೆರವಣಿಗೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. […]