ಕುಕ್ಕರ್ ಕ್ರಿಮಿ ಕುರಿತು ಬಗೆದಷ್ಟು ಬಯಲಾಗುತ್ತಿವೆ ಸ್ಪೋಟಕ ಮಾಹಿತಿ

ಮೈಸೂರು,ನ.23- ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಉಗ್ರ ಶಾರಿಖ್‍ಗೂ ಮೈಸೂರಿಗೂ ಇದ್ದ ನಂಟಿನ ಬಗ್ಗೆ ಬಗೆದಷ್ಟೂ ಸ್ಪೋಟಕ ಮಾಹಿತಿಗಳು ಬಯಲಾಗುತ್ತಲೇ ಇವೆ. ಭಯೋತ್ಪಾದನೆ ಸಾರುವ ಗೋಡೆ ಬರಹ ಸೇರಿದಂತೆ ಇತರೆ ಉಗ್ರ ಕೃತ್ಯ ಎಸಗುತ್ತಿದ್ದ ಶಾರಿಖ್ ಬಗ್ಗೆ ಪತ್ತೆ ಆಗಿದ್ದೇ ಮೈಸೂರಿನ ಸಣ್ಣ ಸುಳಿವಿನಿಂದ ಎಂಬುವುದು ಸ್ಪಷ್ಟವಾಗಿದೆ. ಉಗ್ರ ಶಾರಿಖ್ ಸ್ನೇಹಿತ ಮೊಹಮ್ಮದ್ ರೂರುಲ್ಲಾನ ಕುಟುಂಬಸ್ಥರು ಮೈಸೂರಿನ ರಾಜೀವ್ ನಗರದ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಬಾಂಬ್ ಸ್ಪೋಟಿಸಲು ಮೊಬೈಲ್ ರಿಪೇರಿ ಕಲಿಯುತ್ತಿದ್ದ ಶಾರಿಖ್ ಬಗ್ಗೆ […]

ಮಂಗಳೂರು ಸ್ಪೋಟದ ರುವಾರಿ ಶಾರೀಕ್‍ಗೆ ಐಸಿಸ್ ಲಿಂಕ್

ಬೆಂಗಳೂರು,ನ.21- ಮಂಗಳೂರಿನ ನಾಗೋರಿಯಲ್ಲಿ ಸಂಭವಿಸಿದ ಆಟೋದಲ್ಲಿ ಸ್ಪೋಟ ಪ್ರಕರಣದ ಆರೋಪಿ ಶಾರೀಕ್ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳಿಂದ ಪ್ರಭಾವಿತನಾಗಿದ್ದ ಎಂದು ಸ್ಪಷ್ಟಪಡಿಸಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‍ಕುಮಾರ್, ಕಡಿಮೆ ತೀವ್ರತೆಯ ಸ್ಪೋಟದಿಂದ ಭಾರೀ ದುರಂತವೊಂದು ತಪ್ಪಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನ.19ರಂದು ಮಂಗಳೂರಿನ ನಾಗೋರಿ ಪ್ರದೇಶದಲ್ಲಿ ಸಂಭವಿಸಿದ ಸ್ಪೋಟ ಪ್ರಕರಣ ಕುರಿತಂತೆ ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಸುದೀರ್ಘ ವಿವರಣೆ ನೀಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಈವರೆಗೂ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ, ಮೈಸೂರಿನ ಇಬ್ಬರು, […]