ಸುಂದರ್ ಪಿಚೈಗೆ ಅಮೆರಿಕಾದಲ್ಲಿ ಪದ್ಮಭೂಷಣ ಪ್ರದಾನ

ವಾಷಿಂಗಟನ್,ಡಿ.3- ಜಾಗತಿಕ ಪ್ರತಿಷ್ಠೆಯ ಗೂಗಲ್ ಮತ್ತು ಆಲಾಬೆಟ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚಯ್ ಅವರಿಗೆ ಭಾರತದ ಉನ್ನತಗೌರವಗಳಲ್ಲಿ ಒಂದಾಗ ಪದ್ಮಭೂಷಣವನ್ನು ಭಾರತೀಯ ದೂತವಾಸದ ಅಧಿಕಾರಿಗಳು ಪ್ರದಾನ ಮಾಡಿದ್ದಾರೆ. ಭಾರತದ ತಮಿಳುನಾಡಿನ ಮದುರೈ ಮೂಲದವರಾದ ಸುಂದರ್ ಪಿಚೈ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2022ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಗೆ ಪಿಚೈರನ್ನು ಆಯ್ಕೆ ಮಾಡಿತ್ತು. ವ್ಯಾಪಾರ ಮತ್ತು ಕೈಗಾರಿಕೆ ವಲಯದಲ್ಲಿ ಪ್ರಶಸ್ತಿಗೆ ಭಾಜನರಾದ 17 ಮಂದಿಯಲ್ಲಿ ಪಿಚೈ ಕೂಡ ಒಬ್ಬರು. ಕುಟುಂಬದ ಆಪ್ತ ಬಳಗದ […]