ಸಂತಾನಹೀನ ಪುರುಷರ ‘ಏಝೋಸ್ಪರ್ಮಿಯ’ ಸಮಸ್ಯೆಗೆ ಪರಿಹಾರ

ಬೆಂಗಳೂರು, ಫೆಬ್ರವರಿ 28, 2022: ಬಂಜೆತನ ಎಂದಾಕ್ಷಣ ಬಹುತೇಕರು ಮಹಿಳೆಯರನ್ನಷ್ಟೇ ದೂಷಿಸುತ್ತಾರೆಯೇ ಹೊರತು ಪುರುಷರಿಗೂ ಬಂಜೆತನ ಕಾಡಬಹುದು ಎಂಬ ಸತ್ಯವನ್ನು ಒಪ್ಪುವುದಿಲ್ಲ. ಶೇಕಡಾ 15ರಷ್ಟು ದಂಪತಿಗಳನ್ನು ಬಂಜೆತನ ಬಾಧಿಸುತ್ತದೆ ಮತ್ತು ಅವರ ಪೈಕಿ ಶೇಕಡಾ 40ರಷ್ಟು ಪುರುಷರು ಮತ್ತು ಶೇಕಡಾ 40ರಷ್ಟು ಮಹಿಳೆಯರು, ಅಂದರೆ ಇಬ್ಬರೂ ಸಮಾನ ಪ್ರಮಾಣದಲ್ಲಿ ಬಂಜೆತನದಿಂದ ಬಳಲುತ್ತಾರೆ. ಇನ್ನುಳಿದ ಶೇಕಡಾ 20ರಷ್ಟು ಪ್ರಕರಣಗಳಲ್ಲಿ ದಂಪತಿಗಳಿಬ್ಬರಲ್ಲೂ ಬಂಜೆತನದ ಸಮಸ್ಯೆಯಿರುತ್ತದೆ. ಏಝೋಸ್ಪರ್ಮಿಯ  (Azoospermia) ಶೇಕಡಾ 1 ರಷ್ಟು ಗಂಡಸರನ್ನು ಬಾಧಿಸಿದರೆ, ಬಂಜೆತನದಿಂದ ಬಳಲುವ ಶೇಕಡಾ 15 […]