ರಾಜಕೀಯ ದ್ವೇಷ : ಕೆರೆಗೆ ಕ್ರಿಮಿನಾಶಕ ಹಾಕಿ 5 ಲಕ್ಷ ಮೀನುಗಳನ್ನು ಕೊಂದ ಪಾಪಿಗಳು

ಕುಣಿಗಲ್,ನ.28- ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೆರೆಗೆ ಕ್ರಿಮಿನಾಶಕ ಸಿಂಪಡಿಸಿದ ಪರಿಣಾಮ ಸುಮಾರು 5 ಲಕ್ಷಕ್ಕೂ ಹೆಚ್ಚು ಮೀನಿನ ಮರಿಗಳು ಸಾವನಪ್ಪಿರುವ ಘಟನೆ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಹುತ್ರಿ ದುರ್ಗ ಹೋಬಳಿ ವಡಾಘಟ್ಟ ಗ್ರಾಮದ ಕೆರೆಯಲ್ಲಿ ಈ ಕ್ರತ್ಯ ಎಸಗಲಾಗಿದೆ. ಗ್ರಾಮದ ರೈತ ಚಂದನ್ ಎಂಬುವವರು ಗ್ರಾಮ ಪಂಚಾಯತಿ ಹರಾಜಿನಲ್ಲಿ ಕೆರೆಯಲ್ಲಿ ಮೀನು ಸಾಕಲು ಗುತ್ತಿಗೆ ಪಡೆದು ಈ ಸಂಬಂಧ ಗ್ರಾಮದ ದೇವಾಲಯಕ್ಕೆ 2.50 ಲಕ್ಷ ರೂ. ಹಾಗೂ ಪಂಚಾಯತಿಗೂ ಹಣ ನೀಡಿ […]