ಶಾಲೆ ಬಿಟ್ಟವರಿಗಾಗಿ ಬದುಕುವ ದಾರಿ ಯೋಜನೆ

ಬೆಂಗಳೂರು,ಫೆ.17- ಶಿಕ್ಷಣ ಮುಂದುವರೆಸಲು ಸಾಧ್ಯವಾಗದಿರುವವರಿಗಾಗಿ ಐಟಿಐಗಳಲ್ಲಿ 3 ತಿಂಗಳ ಅವಯ ವೃತ್ತಿಪರ ಸರ್ಟಿಫಿಕೇಟ್ ಕೋರ್ಸ್ ಮಾಡಲು ಅನುಕೂಲವಾಗುವಂತೆ ಬದುಕುವ ದಾರಿ ಎಂಬ ಹೊಸ ಯೋಜನೆ ಆರಂಭಿಸಲು ನಿರ್ಧರಿಸಲಾಗಿದೆ. ಬದುಕುವ ದಾರಿ ಯೋಜನೆಯಡಿ ಐಟಿಐಗಳಲ್ಲಿ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಮಾಸಿಕ 1500 ರೂ.ಗಳ ಶಿಷ್ಯವೇತನ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಳಿಸಿದವರಿಗೆ 3 ತಿಂಗಳಿಗೆ 1500 ರೂ.ಗಳ ಶಿಶಿಕ್ಷು ಭತ್ಯೆ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಿಸಿದ್ದಾರೆ. ಪದವಿ ಶಿಕ್ಷಣ ಮುಗಿಸಿದ ಮೂರು ವರ್ಷಗಳ ನಂತರವೂ ಉದ್ಯೋಗ ದೊರೆಯದ ಯುವಕರು […]