ಬಗರ್ ಹುಕುಂ ಸಾಗುವಳಿ ಸಕ್ರಮದ ಹಕ್ಕಿಗೆ ಮತ್ತೊಂದು ವರ್ಷ ಕಾಲಾವಕಾಶ

ಬೆಂಗಳೂರು,ಸೆ.19- ಬಗರ್‍ಹುಕುಂ ಸಾಗುವಳಿ ಉಳುಮೆದಾರರಿಗೆ ಜಮೀನನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಕೆಗೆ ಮತ್ತೊಂದು ಅವಕಾಶವನ್ನು ನೀಡಲಾಗಿದೆ. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ 2022ರ ತಿದ್ದುಪಡಿಯನ್ನು ಮುಖ್ಯಮಂತ್ರಿ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಪರಿಷತ್‍ನಲ್ಲಿ ಮಂಡಿಸಿದರು. ಕಾಯ್ದೆಯ ಕುರಿತು ವಿವರಣೆ ನೀಡಿದ ಅವರು, 2005ರ ಜನವರಿ 1ರ ಹಿಂದಿನ ಸಾಗುವಳಿದಾರರಿಗೆ 2018 ಮಾರ್ಚ್ 17ರಿಂದ 2019ರ ಮಾರ್ಚ್ 16ರವರೆಗೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಚುನಾವಣೆ ನೀತಿ ಸಂಹಿತೆ […]