ಹರ್ಷ ಹತ್ಯೆಗೆ ಅಸಲಿ ಕಾರಣವೇನು..? ಗೃಹ ಸಚಿವರು ಹೇಳಿದ್ದೇನು..?
ಬೆಂಗಳೂರು,ಫೆ.22- ಶಿವಮೊಗ್ಗದಲ್ಲಿ ನಡೆದ ಯುವಕನ ಹತ್ಯೆ ಘಟನೆಯ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಷಯಕ್ಕಾಗಿದೆಯೇ? ಮತೀಯ ಸಂಘಟನೆ ಹಿನ್ನೆಲೆ ಇದೆಯೇ? ಯಾರು ಹಣ ಒದಗಿಸಿದರು? ಯಾರು ವಾಹನ ಒದಗಿಸಿದ್ದಾರೆ ಎಂಬುದು ಸೇರಿದಂತೆ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ ಎಂದರು. ಈ ರೀತಿಯ ಕೊಲೆಗಳು ನಿಲ್ಲಬೇಕು. ಹರ್ಷನ ಹತ್ಯೆಯೇ ಕೊನೆಯ ಕೊಲೆಯಾಗಬೇಕು. ಈ ಘಟನೆಗೆ ಸಂಬಂಧಿಸಿದಂತೆ ಮೂರು ಮಂದಿಗಳನ್ನು ಬಂಧಿಸಲಾಗಿದೆ. […]