“ಶಿವಮೊಗ್ಗದಲ್ಲಿ ಶಾಲೆ-ಕಾಲೇಜು ಆರಂಭ ವಿಚಾರ ಡಿಸಿ ನಿರ್ಧಾರಕ್ಕೆ ಬಿಟ್ಟಿದ್ದು”

ಬೆಂಗಳೂರು,ಫೆ.22- ಶಿವಮೊಗ್ಗದಲ್ಲಿ ಶಾಲಾ- ಕಾಲೇಜು ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧಾರ ಮಾಡುತ್ತಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ವಿಕಾಸಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಹಿಜಾಬ್‍ಗೊಂದಲ-ಶಾಲಾ-ಕಾಲೇಜು ನಡೆಯುತ್ತಿರುವ ಕುರಿತು ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಾಳೆಯಿಂದ ಯಥಾಸ್ಥಿತಿ ಕಾಯ್ದುಕೊಂಡು ಶಾಲಾ-ಕಾಲೇಜು ತೆರೆಯುತ್ತೇವೆ. ಇಂದು ಗಂಭೀರ ಪರಿಸ್ಥಿತಿ ಇದ್ದ ಕಾರಣ ಒಂದು ದಿನ ರಜೆ ನೀಡಲಾಗಿದೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್ ನೀಡಿರುವ ಹೇಳಿಕೆಗಳನ್ನು ಜನ […]

ಗಲಭೆಗೆ ಹಿಜಾಬ್ ವಿಚಾರ ಮತ್ತು ವಿದೇಶಿ ಶಕ್ತಿಗಳ ಕೈವಾಡ ಕಾರಣ : ಸಚಿವ ಅಶೋಕ್

ಬೆಂಗಳೂರು,ಫೆ.22- ಹಿಜಾಬ್ ವಿಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್‍ಗಾಗಿ ಹೆಣ್ಣುಮಕ್ಕಳು ಪ್ರತಿಭಟನೆ ಮಾಡಿರುವುದು ಸ್ಥಳೀಯ ಮಾಧ್ಯಮಗಳಿಗಿಂತ ವಿದೇಶಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಯಾವುದೇ ದೇಶದ್ರೋಹಿಯನ್ನು ಬಿಡುವುದಿಲ್ಲ. ಮಟ್ಟ ಹಾಕುತ್ತೇವೆ ಎಂದು ಗುಡುಗಿದರು. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಯುವಕನ ಹತ್ಯೆ ಪ್ರಕರಣ ಹಾಗೂ ಗಲಭೆಯಾಗಿರುವುದು ಗುಂಡಾಗಿರಿಗೆ, ನಿರಂತರವಾಗಿ ಎಸ್‍ಡಿಪಿಐ, ಪಿಎಫ್‍ಐನಂತಹ ಸಂಘಟನೆಗಳು ಕ್ರಿಯಾಶೀಲರಾಗಿರುವುದಕ್ಕೆ ನಿದರ್ಶನ. ಈ ಗಲಭೆಗೆ ಹಿಜಾಬ್ ಕಾರಣ ಎಂದು ಗೊತ್ತಾಗಿದೆ. ಘಟನೆ ಬಗ್ಗೆ […]