ಭಾರತದ ಮೇಲೂ ಹಾರಾಟ ನಡೆಸಿದ್ದ ಚೀನಾ ಬೇಹುಗಾರಿಕೆ ಬಲೂನ್‍ಗಳು..!

ನವದೆಹಲಿ,ಫೆ.25-ಅಮೆರಿಕದ ಬಾಹ್ಯಾಕಾಶದಲ್ಲಿ ಕಾಣಿಸಿಕೊಂಡಿದ್ದ ದೈತ್ಯ ಬಲೂನ್ ಮಾದರಿಯ ವಸ್ತುವೊಂದು ಒಂದು ವರ್ಷದ ಹಿಂದೆ ಭಾರತದಲ್ಲೂ ಕಾಣಿಸಿಕೊಂಡಿತ್ತು ಎನ್ನುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಒಂದು ವರ್ಷದ ಹಿಂದೆ ಸಿಂಗಾಪುರಕ್ಕೆ ಸಮೀಪವಿರುವ ಭಾರತೀಯ ದ್ವೀಪಗಳಾದ ಅಂಡಮಾನ್ ಮತ್ತು ನಿಕೋಬಾರ್ ಮೇಲೆ ಅಸಾಮಾನ್ಯ ವಸ್ತುವೊಂದು ಹಾರಾಟ ನಡೆಸಿದ್ದವು. ಇದು ಭಾರತದ ರಕ್ಷಣಾ ವ್ಯವಸ್ಥೆಗೆ ಗಾಬರಿ ತರಿಸಿತ್ತು ಎನ್ನಲಾಗಿದೆ. ಭಾರತ ಕ್ಷಿಪಣಿ ಪರೀಕ್ಷಾ ಪ್ರದೇಶಗಳಿಗೆ ಸಮೀಪದಲ್ಲಿರುವ ಹಾಗೂ ಮಲಕ್ಕಾ ಜಲಸಂಧಿಯಿರುವ ಪ್ರದೇಶಗಳ ಆಕಾಶದಲ್ಲಿ ದೈತ್ಯ ವಸ್ತು ಮಾದರಿಯ ಬಲೂನ್ ಹಾರಾಟ ಮಾಡುವುದನ್ನು […]

ಅಮೆರಿಕಾ ಜೊತೆಗಿನ ಸಮಾಲೋಚನೆ ನಿರಾಕರಿಸಿದ್ದನ್ನು ದೃಢಪಡಿಸಿದ ಚೀನಾ

ಬೀಜಿಂಗ್,ಫೆ.10- ಆಕಾಶದಲ್ಲಿ ಹಾರಾಡುತ್ತಿದ್ದ ನಮ್ಮ ಬಲೂನ್ ಅನ್ನು ಬೇಹುಗಾರಿಕೆ ಶಂಕೆಯ ಮೇಲೆ ಅಮೆರಿಕಾ ಹೊಡೆದುರಿಳಿಸಿದ ನಂತರ ಮಾತುಕತೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿಲ್ಲ ಎಂದು ಚೀನಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್‍ರ ಕರೆಯನ್ನು ಸ್ವೀಕರಿಸಲು ನಿರಾಕರಿಸಲಾಗಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಚೀನಾದ ಸಚಿವಾಲಯದ ವಕ್ತಾರ ಟಾನ ಕೆಫೀ ಸ್ಪಷ್ಟನೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ. ಅಮೆರಿಕಾದೊಂದಿಗೆ ಮಾತುಕತೆಗೆ ಪರಿಸ್ಥಿತಿ ಪೂರಕವಾಗಿಲ್ಲ. ಮೇಲಾಗಿ ಅಮೆರಿಕಾ ಅಂತರಾಷ್ಟ್ರೀಯ ಕಾನೂನುಗಳನ್ನು ಗಂಭೀರವಗಿ ಉಲ್ಲಂಘಿಸಿದೆ ಮತ್ತು ವಿನಾಶಕಾರಿ ಪೂರ್ವ […]

ಗೂಢಚಾರಿಕೆ ಬಲೂನ್ ಹೊಡೆದುರುಳಿಸಿದ ಅಮೆರಿಕ ವಿರುದ್ಧ ಚೀನಾ ಕೆಂಡ

ಬೀಜಿಂಗ್,ಫೆ.5- ಗೂಢಚಾರಿಕೆ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿರುವುದು ಚೀನಾವನ್ನು ಕೆರಳಿಸಿದೆ. ನಿಮ್ಮ ನಿರ್ಧಾರಕ್ಕೆ ನಾವು ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದೂ ಎಚ್ಚರಿಸಿದೆ. ಚೀನಾದ ಗೂಢಚಾರಿಕೆ ಬಲೂನ್ ಅನ್ನು ಅಟ್ಲಾಂಟಿಕ ಕರಾವಳಿಯಲ್ಲಿ ಹೊಡೆದುರುಳಿಸಿರುವ ಪೆಂಟಗಾನ್ ಕ್ರಮವನ್ನು ಬಿಡೆನ್ ಆಡಳಿತ ಶ್ಲಾಘಿಸಿರುವ ಬೆನ್ನಲ್ಲೆ ಚೀನಾ ಅತೃಪ್ತಿ ಹೊರಹಾಕಿರುವುದು ಗಮನಿಸಿದರೆ ಎರಡು ಬಲಾಢ್ಯ ರಾಷ್ಟ್ರಗಳ ನಡುವಿನ ವೈಷಮ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಚೀನಾದ ನಡೆ ನಮ್ಮ ದೇಶಕ್ಕೆ ವಿರುದ್ಧವಾದ ನಡೆಯಾಗಿರುವುದರಿಂದ ಬಲೂನ್ ಹೊಡೆದುರುಳಿಸಿರುವ ನಮ್ಮ ಕಾರ್ಯ ಕಾನೂನುಬದ್ಧವಾಗಿದೆ ಎಂದು ಅಮೆರಿಕ […]

ಬಲೂನ್ ಹಾರಾಟದ ಬೆನ್ನಲ್ಲೇ ಅಮೇರಿಕಾ ಕಾರ್ಯದರ್ಶಿ ಚೀನಾ ಪ್ರವಾಸ ಮುಂದೂಡಿಕೆ

ವಾಷಿಂಗ್‍ಟನ್,ಫೆ.4- ಅಮೇರಿಕಾದಲ್ಲಿ ಚೀನಾದ ಮತ್ತೊಂದು ಬೇಹುಗಾರಿಕೆಯ ಬಲೂನ್ ಹಾರಾಟದ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವಣ ಸಂಬಂದ ಮತ್ತಷ್ಟು ಹಳಸಲಾರಂಭಿಸಿದ್ದು, ಅಮೇರಿಕಾದ ಕಾರ್ಯದರ್ಶಿ ಚೀನಾ ಪ್ರವಾಸವನ್ನು ಮುಂದೂಡಿದ್ದಾರೆ. ಪೆಂಟಗಾನ್‍ನ ಪತ್ರಿಕಾ ಕಾರ್ಯದಶಿ ಬ್ರೀಗೆಡ್ ಜನರಲ್ ಪಟ್ ರೈಡರ್ ಹೇಳಿಕೆ ಈ ಬಗ್ಗೆ ನೀಡಿದ್ದು , ಲಾಟಿನ್ ಅಮೇರಿಕಾದಲ್ಲಿ ಮತ್ತೊಂದು ಬಲೂನ್ ಸಂಚರಿಸಿರುವ ವರದಿಗಳನ್ನು ನೋಡಿದ್ದು, ಅದು ಚೀನಾದ ಬಲೂನ್ ಎಂಬ ಅನುಮಾನವಿದೆ. ಸದ್ಯಕ್ಕೆ ತಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಏಕಕಾಲಕ್ಕೆ 3 ಬಸ್‍ಗಳನ್ನು ಸಾಗಿಸಬಹುದಾದಷ್ಟು […]