‘ಬಾನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಪತ್ನಿಯ ಕೊಲೆ
ಬೆಂಗಳೂರು,ಆ.17- ಬಾನಲ್ಲೇ ಮಧುಚಂದ್ರಕೆ ಎಂಬ ಸಿನಿಮಾ ಶೈಲಿಯಲ್ಲಿ ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದ ಕಾರಿನಲ್ಲೇ ಸ್ನೇಹಿತನ ಜೊತೆ ಸೇರಿ ವೇಲ್‍ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಆರೋಪಿ ಪತಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೃಥ್ವಿರಾಜ್(30) ಬಂಧಿತ ಆರೋಪಿ. ತಲೆಮರೆಸಿಕೊಂಡಿರುವ ಈತನ ಸ್ನೇಹಿತ, ಬಿಹಾರ ಮೂಲದ ಸಮೀರ್ ಕುಮಾರ್‍ನ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ. ಬಿಕಾಂ ಪದವೀಧರೆ ಜ್ಯೋತಿಕುಮಾರಿ(38) ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆ ಸಂದರ್ಭದಲ್ಲೇ ಪೃಥ್ವಿರಾಜ್‍ನನ್ನು ಪ್ರೀತಿಸಿ ಕಳೆದ ನವೆಂಬರ್‍ನಲ್ಲಿ ವಿವಾಹವಾಗಿದ್ದರು. ಇವರ ಮಧ್ಯೆ ವಯಸ್ಸಿನ ಅಂತರವಿತ್ತು. […]