ನಾಳೆ ಜೆಡಿಎಸ್ ಕೋರ್ ಸಮಿತಿ ಮೊದಲ ಸಭೆ

ಬೆಂಗಳೂರು,ಜ.26-ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಅಧ್ಯಕ್ಷತೆಯಲ್ಲಿ ಜೆಡಿಎಸ್ ಕೋರ್ ಸಮಿತಿ ರಚಿಸಲಾಗಿದ್ದು, ನಾಳೆ ಅದರ ಮೊದಲ ಸಭೆ ನಡೆಯಲಿದೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆಯೂ ನಾಳೆ ಚರ್ಚೆ ನಡೆಯಲಿದೆ. ಕೋರ್ ಸಮಿತಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹಾಗೂ ತಾವು ವಿಶೇಷ ಆಹ್ವಾನಿತರಾಗಿರುತ್ತೇವೆ ಎಂದರು. ಸಮಿತಿಯು ಪಕ್ಷ ಸಂಘಟನೆ, ಬಲವರ್ಧನೆಗೆ ರೂಪಿಸಿರುವ ಯೋಜನೆಗಳು, ಚುನಾವಣಾ ಪ್ರಕ್ರಿಯೆ ಒಳಗೊಂಡಂತೆ ಪಕ್ಷದ ನಿಲುವುಗಳ ಬಗ್ಗೆ ಚರ್ಚಿಸಿ […]