ಕೊರೊನಾ ವಿಚಾರದಲ್ಲಿ ಬೆಂಗಳೂರಿನ ಈ ವಾರ್ಡ್ ಮೋಸ್ಟ್ ಡೇಂಜರಸ್..!

ಬೆಂಗಳೂರು,ಜ.28-ಇಡೀ ನಗರದಲ್ಲೇ ಬೆಳ್ಳಂದೂರು ವಾರ್ಡ್ ಮೋಸ್ಟ್ ಡೇಂಜರಸ್ ವಾರ್ಡ್ ಎಂಬ ಕುಖ್ಯಾತಿಗೆ ಒಳಗಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮಹದೇವಪುರ ವಲಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿನ 17 ವಾರ್ಡ್‍ಗಳಲ್ಲೂ ಕೊರೊನಾ ಸೋಂಕು ಅಬ್ಬರಿಸುತ್ತಿದೆ. ಅದರಲ್ಲೂ ಬೆಳ್ಳಂದೂರು ವಾರ್ಡ್‍ನಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿರುವುದರಿಂದ ಆ ವಾರ್ಡ್ ಅನ್ನು ಡೇಂಜರಸ್ ವಾರ್ಡ್ ಎಂದು ಘೋಷಿಸಲಾಗಿದೆ. ಒಂದು ಲಕ್ಷದ 25 ಸಾವಿರ ಮಂದಿ ವಾಸಿಸುತ್ತಿರುವ ಬೆಳ್ಳಂದೂರು ವಾರ್ಡ್‍ನಲ್ಲಿ ಪ್ರತಿನಿತ್ಯ 700ಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. […]