ಬೊಮ್ಮನಹಳ್ಳಿಗೆ ತಪ್ಪದ ಕೊರೊನಾ ಕಾಟ

ಬೆಂಗಳೂರು,ಫೆ.4- ನಗರದಲ್ಲಿ ಕೊರೊನಾರ್ಭಟ ಕಡಿಮೆಯಾಗುತ್ತಿದ್ದರೂ ಬೊಮ್ಮನಹಳ್ಳಿ ವಲಯ ಮಾತ್ರ ಇನ್ನು ಡೇಂಜರ್ ಜೋನ್‍ನಲ್ಲೇ ಇದೆ. ಇಂದು ನಗರದಲ್ಲಿ 5679 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಎಂಟು ವಲಯಗಳಲ್ಲಿ 7 ವಲಯಗಳಲ್ಲಿ ಸೋಂಕಿನ ತೀವ್ರತೆ ಕಡಿಮೆಯಾದರೂ ಬೊಮ್ಮನಹಳ್ಳಿ ವಲಯದಲ್ಲಿ ಮಾತ್ರ ಕೊರೊನಾರ್ಭಟ ನಿಂತಿಲ್ಲ. ಬೊಮ್ಮನಹಳ್ಳಿ ವಲಯ ಒಂದರಲ್ಲೇ ಪ್ರತಿನಿತ್ಯ ಸಾವಿರಾರು ಮಂದಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಇಂದು ಒಂದೇ ದಿನ ಈ ವಲಯದಲ್ಲಿ 1239 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಅಪಾರ್ಟ್‍ಮೆಂಟ್‍ಗಳಿವೆ. ಇಂತಹ […]