ಬೆಂಗಳೂರಿನಲ್ಲಿ ಇಂದು ಮತ್ತೆ 21 ಸಾವಿರ ಮಂದಿಗೆ ಕೊರೊನಾ

ಬೆಂಗಳೂರು,ಜ.26- ನಗರದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಇಂದು 21025 ಮಂದಿಗೆ ಕೊರೊನಾ ಕಾಣಿಸಿಕೊಂಡಿರುವುದರಿಂದ ಆತಂಕ ಎದುರಾಗಿದೆ. ಕಳೆದ ಒಂದು ವಾರದಿಂದ ಕೊರೊನಾ ಏರಿಕೆ ಪ್ರಮಾಣ ಇಳಿಮುಖದತ್ತ ಮುಖ ಮಾಡಿತ್ತು. ಹೀಗಾಗಿ ನಿನ್ನೆ ಕೇವಲ 15 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಕೇವಲ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಸುಮಾರು ಆರು ಸಾವಿರದಷ್ಟು ಹೆಚ್ಚಳವಾಗಿರುವುದರಿಂದ ನಾಗರೀಕರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಕೇವಲ ಸೋಂಕಿನ […]

ಬೆಂಗಳೂರಿನಲ್ಲಿ ಕೊರೊನಾ ಕೇಕೆ, ಇಂದು 22,966 ಮಂದಿಗೆ ಪಾಸಿಟಿವ್..!

ಬೆಂಗಳೂರು, ಜ.18- ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚಮಟ್ಟಿನ ಏರಿಕೆ ಕಂಡಿದೆ. ವೀಕೆಂಡ್ ನಂತರ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಇದೀಗ ಮತ್ತೆ ಕೊಂಚ ಮಟ್ಟಿನ ಏರಿಕೆಯಾಗಿದ್ದು, ಇಂದು ನಗರದಲ್ಲಿ 22,966 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಶನಿವಾರ, ಭಾನುವಾರ ವೀಕೆಂಡ್ ಕಫ್ರ್ಯೂ ದಿನಗಳಾದ್ದರಿಂದ ಹೆಚ್ಚು ಜನ ಹೊರಗೆ ಬಾರದೆ ಟೆಸ್ಟಿಂಗ್ ಕಡಿಮೆಯಾದ ಕಾರಣದಿಂದಲೂ ಸೋಮವಾರ ಸೋಂಕು ಇಳಿಮುಖವಾಗಿತ್ತು ಎನ್ನಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ 2725, ದಾಸರಹಳ್ಳಿ 590, ಬೆಂಗಳೂರು ಪೂರ್ವ 3661, ಮಹದೇವಪುರ 3020, ಆರ್‍ಆರ್ ನಗರ […]

ಇಡೀ ದೇಶದಲ್ಲೇ ಬೆಂಗಳೂರು ಕೊರೊನಾ ಹಾಟ್‍ಸ್ಪಾಟ್..!

ಬೆಂಗಳೂರು, ಜ.12- ಇಡೀ ದೇಶದಲ್ಲೇ ಬೆಂಗಳೂರು ಕೊರೊನಾ ಹಾಟ್‍ಸ್ಪಾಟ್ ಸಿಟಿಯಾಗಿ ಪರಿವರ್ತನೆಯಾಗಿದೆ. ದಿನೇ ದಿನೇ ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳನ್ನು ಗಮನಿಸಿದರೆ ಇಲ್ಲಿ ಜನ ವಾಸ ಮಾಡಲು ಸಾಧ್ಯವೆ ಎಂಬ ಅನುಮಾನ ಕಾಡತೊಡಗಿದೆ. ಇಂದು ಒಂದೇ ದಿನ ಬರೋಬ್ಬರಿ 15,617 ಮಂದಿಗೆ ಕೊರೊನಾ ಮಹಾಮಾರಿ ಒಕ್ಕರಿಸಿದೆ. ಇದರಿಂದ ಗಲ್ಲಿ ಗಲ್ಲಿಗಳಲ್ಲಿಯೂ ಸೋಂಕು ಕಂಡು ಬರುತ್ತಿದೆ. ನಿನ್ನೆ 10,800 ಮಂದಿಗೆ ಸೋಂಕು ತಗುಲಿತ್ತು. ಇಂದು 15,617 ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇರುವುದರಿಂದ ಒಂದೇ ದಿನದಲ್ಲಿ 4817 […]