ಬೆಂಗಳೂರಿನಲ್ಲಿ ಡಬಲ್‍ರೋಡ್ ಮೇಲ್ಸೇತುವೆ ಮೇಲೆ ಬಲಿಗಾಗಿ ಕಾಯುತ್ತಿವೆ ಗುಂಡಿಗಳು..!
ಬೆಂಗಳೂರು, ಫೆ.11- ಕೋರ್ಟ್ ಏನೇ ಛೀಮಾರಿ ಹಾಕಿದರೂ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದೇ ಇಲ್ಲ ಎಂಬುದಕ್ಕೆ ಇಲ್ಲಿದೆ ಸಾಕ್ಷಿ. ವಾಹನ ಸವಾರರಿಗೆ ಮೃತ್ಯುಕೂಪವಾಗಿರುವ ರಸ್ತೆಗುಂಡಿಗಳಿಗೆ ಮುಕ್ತಿ ಹಾಡದಿದ್ದರೆ ಜೈಲಿಗಟ್ಟಬೇಕಾಗುತ್ತದೆ ಎಂದು ನ್ಯಾಯಾಲಯ ಗಂಭೀರ ಎಚ್ಚರಿಕೆ ನೀಡಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ತಮ್ಮ ಎಂದಿನ ಉದಾಸೀನ ಧೋರಣೆಯನ್ನು ಮುಂದು ವರೆಸಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಡಬಲ್‍ರೋಡ್ ಮೇಲ್ಸೇತುವೆ ಮೇಲೆ ಡೆಡ್ಲಿ ಗುಂಡಿ ಗಳಿದ್ದರೂ ಅವುಗಳನ್ನು ಮುಚ್ಚುವ ಗೋಜಿಗೆ ಹೋಗಿಲ್ಲ. ಡಬಲ್‍ರೋಡ್ ಮೇಲ್ಸೇತುವೆ ಮೇಲೆ ಇರುವ ಗುಂಡಿಗಳು ಮೂರಡಿ ಉದ್ದ ಇದ್ದು, […]