ತಿಂಗಳು ಕಳೆದರು ಮುಗಿದಿಲ್ಲ ತುಮಕೂರು ರಸ್ತೆಯ ಫ್ಲೈಓವರ್ ದುರಸ್ತಿ ಕಾರ್ಯ

ಬೆಂಗಳೂರು,ಜ.27-ತುಮಕೂರು ರಸ್ತೆ ಸಂಚಾರದ ಅಧ್ವಾನ ಇನ್ನೂ ಮುಗಿದಿಲ್ಲ. ನೆಲಮಂಗಲ-ಗೊರಗುಂಟೆಪಾಳ್ಯದ ಮೇಲ್ಸೇತುವೆಯ ಪಿಲ್ಲರ್ ಸಂಖ್ಯೆ 102 ಮತ್ತು 103ರ ಲಿಂಕ್ ಕೇಬಲ್ ಸಡಿಲಗೊಂಡಿದ್ದರಿಂದ ಕಳೆದ ಡಿಸಂಬರ್ ಅಂತ್ಯದಲ್ಲಿ ಮೇಲ್ಸೇತುವೆ ಮೇಲಿನ ಸಂಚಾರವನ್ನು ದಿಢೀರ್ ಸ್ಥಗಿತಗೊಳಿಸಲಾಗಿತ್ತು. ಮೇಲ್ಸೇತುವೆ ದುರಸ್ತಿ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಂಗಳು ಕಳೆದರೂ ಇನ್ನು ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಜನ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುವ ತುಮಕೂರು ಹೆದ್ದಾರಿ ಒಂದು ತಿಂಗಳಿನಿಂದ ಬಂದ್ ಆಗಿರುವುದರಿಂದ […]