ಶಾಲೆಗಳ ಪುನರಾರಂಭಕ್ಕೆ ರುಪ್ಸಾ ಒತ್ತಾಯ

ಬೆಂಗಳೂರು,ಜ.17-ಕೊರೊನಾ ಹಿನ್ನಲೆಯಲ್ಲಿ ಬಂದ್ ಮಾಡಲಾಗಿರುವ ಶಾಲೆಗಳನ್ನು ಮತ್ತೆ ತೆರೆಯಬೇಕು ಎಂದು ಖಾಸಗೀ ಶಾಲೆಗಳ ಒಕ್ಕೂಟ (ರುಪ್ಸಾ ) ಒತ್ತಾಯಿಸಿದೆ. ಕೊರೊನಾ ಹೆಚ್ಚಿರುವ ರಾಜ್ಯದ 6 ಜಿಲ್ಲೆಗಳಲ್ಲಿ ಒಂದರಿಂದ 9ರವರೆಗಿನ ಶಾಲೆಗಳನ್ನು ಸರ್ಕಾರ ಬಂದ್ ಮಾಡಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಹತ್ತಿರವಾಗುತ್ತಿರುವುದರಿಂದ 5ನೆ ತರಗತಿ ಮೇಲ್ಪಟ್ಟ ತರಗತಿಗಳನ್ನು ಆರಂಭಿಸಲು ಅನುಮತಿ ನೀಡುವಂತೆ ರುಪ್ಸಾ ಮನವಿ ಮಾಡಿಕೊಂಡಿದೆ. ಕಳೆದ ಒಂದೂವರೆ ವರ್ಷದಿಂದ ಭೌತಿಕ ತರಗತಿಗಳು ಸರಿಯಾಗಿ ನಡೆದಿಲ್ಲ, ಈಗ ಮತ್ತೆ 1 ರಿಂದ 9ನೆ ತರಗತಿವರೆಗೆ ಶಾಲೆಗಳನ್ನು ಬಂದ್ ಮಾಡಲಾಗಿದೆ. […]