ಓದಿದ್ದು ಎಂಜಿನಿಯರಿಂಗ್, ಮಾಡ್ತಿದ್ದಿದ್ದು ಬ್ಯಾಂಕ್ ದರೋಡೆ, ರೋಚಕವಾಗಿದೆ ಇವನ ಸ್ಟೋರಿ

ಬೆಂಗಳೂರು,ಜ.22- ಆನ್‍ಲೈನ್ ಒಲಿಂಪಿ ಟ್ರೇಡಿಂಗ್‍ನಲ್ಲಿ ಹಣ ತೊಡಗಿಸಿ ನಷ್ಟವುಂಟಾಗಿ ಮಾಡಿಕೊಂಡಿದ್ದ ಸಾಲದ ಹಣ ತೀರಿಸಲು ಬ್ಯಾಂಕ್ ದರೋಡೆ ಮಾಡಿದ್ದ ಮೆಕ್ಯಾನಿಕಲ್ ಎಂಜಿನಿಯರನ್ನು ಬಂಧಿಸಿ ನಗದೂ ಸೇರಿದಂತೆ 85.38 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಮಡಿವಾಳ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಮಾಕ್ಷಿಪಾಳ್ಯದ ನಿವಾಸಿಧೀರಜ್ (28) ಬಂಧಿತ ಮೆಕಾನಿಕಲ್ ಎಂಜನಿಯರ್. ಇವರ ತಂದೆ ಗಾರೆ ಮೇಸ್ತ್ರಿ. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಈತನಿಗೆ 30 ಸಾವಿರ ಸಂಬಳ ಬರುತ್ತಿತ್ತು. ವಿದ್ಯಾವಂತನಾದ ಧೀರಜ್ ಆಮಿಷಕ್ಕೆ ಒಳಗಾಗಿ ಒಲಿಂಪಿ ಟ್ರೇಡಿಂಗ್‍ನಲ್ಲಿ ಹಣ […]