ಶ್ರೀಲಂಕಾದಲ್ಲಿ ಏನಾಗುತ್ತಿದೆ..? ಇಲ್ಲಿದೆ ಹೊಸ ಅಪ್ಡೇಟ್ಸ್
ಕೊಲಂಬೊ,ಜು.10- ಆರ್ಥಿಕ ಸಂಕಷ್ಟದಿಂದ ದಿಕ್ಕೆಟ್ಟಿರುವ ಶ್ರೀಲಂಕಾದಲ್ಲಿ ಅರಾಜಕತೆ ಉತ್ತುಂಗಕ್ಕೇರಿದ್ದು, ಹಿಂಸಾ ರೂಪ ಪಡೆದಿರುವ ಪ್ರತಿಭಟನೆಯ ಬೆಳವಣಿಗೆಗಳ ಮೇಲೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ನಿಗಾ ಇರಿಸಿವೆ. ಪ್ರಧಾನಿ ರಾಜೀನಾಮೆ ಬಳಿಕವೂ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ. ಅಧ್ಯಕ್ಷರ ಮನೆಯಲ್ಲಿ ಬೀಡುಬಿಟ್ಟಿರುವವರು ಈಗಲೂ ಹೊರಬರದೆ ಗದ್ದಲ ಮುಂದುವರೆಸಿದ್ದಾರೆ. ಸರ್ಕಾರ ವಿರೋ ಪ್ರತಿಭಟನಕಾರರ ಉದ್ರಿಕ್ತತೆ ಮಿತಿಮೀರಿದ್ದು, ಬಿಗಿಭದ್ರತೆಯನ್ನು ಛೇದಿಸಿ ಅಧ್ಯಕ್ಷರ ಮನೆಗೆ ನುಗ್ಗಿದ್ದಾರೆ. ಅಧ್ಯಕ್ಷರ ಬಂಗಲೆಯಲ್ಲಿನ ಈಜಾಡುವ ಮೂಲಕ ಮೋಜು ಅನುಭವಿಸಿದ್ದಾರೆ. ಜಿಮ್‍ನ್ನು ಬಳಸಿದ್ದಾರೆ. ಅಡುಗೆ ಮನೆಯಲ್ಲಿ ಆಹಾರ ಪದಾರ್ಥಗಳನ್ನು ಸೇವಿಸಿ […]