ಮದ್ದೂರಿನ ಶಿಂಷಾ ಸೇರಿ 7 ಸಹಕಾರ ಬ್ಯಾಂಕ್‍ಗಳಿಗೆ ಆರ್‌ಬಿಐ ನಿರ್ಬಂಧ

ನವದೆಹಲಿ,ಫೆ.25- ಆರ್ಥಿಕವಾಗಿ ಜನರ ಜೀವನಾಡಿಯಾಗಿದ್ದ ಸಹಕಾರ ಬ್ಯಾಂಕ್‍ಗಳಲ್ಲಿ ದಿನೇ ದಿನೇ ಅವ್ಯವಹಾರಗಳು, ಅಕ್ರಮಗಳು, ಅಶಿಸ್ತು ಹೆಚ್ಚುತ್ತಿದ್ದು, ಕೇಂದ್ರ ಬ್ಯಾಂಕ್ ಆರ್‌ಬಿಐ ಒಂದೇ ದಿನ ಮಂಡ್ಯ ಜಿಲ್ಲೆಯ ಮದ್ದೂರಿನ ಸಂಸ್ಥೆಯೂ ಸೇರಿದಂತೆ ದೇಶಾದ್ಯಂತ ಏಳು ಸಹಕಾರ ಬ್ಯಾಂಕ್‍ಗಳ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಿದೆ. ಬ್ಯಾಂಕಿಂಗ್ ರೆಗ್ಯೂಲೇಷನ್ ಆಕ್ಟ್ 1949 ಸೆಕ್ಷನ್ 35 ಎ ಮತ್ತು ಓದಲಾದ 56 ಕಲಂ ಅಡಿ ಸದರಿ ಬ್ಯಾಂಕ್‍ಗಳಿಗೆ ಆರು ತಿಂಗಳ ಕಾಲ ಯಾವುದೇ ವಹಿವಾಟು ನಡೆಸಬಾರದು ಎಂಬ ನಿರ್ಬಂಧ ವಿಧಿಸಲಾಗಿದೆ. ಆರ್‍ಬಿಐನ ಪ್ರಧಾನ […]

ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದು ಬ್ಯಾಂಕ್‍ಗಳಿಗೆ ವಂಚನೆ

ಬೆಂಗಳೂರು, ಜ.30- ಕೋಟ್ಯಂತರ ಬೆಲೆ ಬಾಳುವ ಸೈಟ್‍ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‍ಗಳಲ್ಲಿ ಲೋನ್ ತೆಗೆದುಕೊಂಡು ವಂಚಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚಕನ ವಿರುದ್ಧ 7 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಬಂಧಿಸಲು ಹೋದಾಗ ಅವರಿಗೆ ಧಮ್ಕಿ ಹಾಕಿದ್ದಾನೆ.ಈತ ತಂಡವೊಂದನ್ನು ಕಟ್ಟಿಕೊಂಡು 2016ರಿಂದ ನಗರದಲ್ಲಿ ಬೆಲೆ ಬಾಳುವ ಸೈಟ್‍ಗಳನ್ನು ಗುರುತಿಸಿಕೊಂಡು ಅವುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆ ದಾಖಲೆಗಳನ್ನು ಬ್ಯಾಂಕ್‍ಗಳಿಗೆ ನೀಡಿ ಕೋಟ್ಯಂತರ ರೂ. ಹಣ ಲೋನ್ ತೆಗೆದುಕೊಂಡು ಲೋನ್ ಹಣ ತೀರಿಸದೆ ಮೊಬೈಲ್ […]

ಕನ್ನಡಕ್ಕೆ ಸ್ಪಂದಿಸದ ಬ್ಯಾಂಕ್‍ಗಳನ್ನ ಧಿಕ್ಕರಿಸಿ : ದೊಡ್ಡರಂಗೇಗೌಡರು

ಹಾವೇರಿ,ಜ.6- ಕನ್ನಡ ಭಾಷೆಯಲ್ಲಿ ಕಾರ್ಯನಿರ್ವಹಿಸದ ಬ್ಯಾಂಕುಗಳು, ಸರ್ಕಾರಿ ಉದ್ಯಮಿಗಳು, ಖಾಸಗಿ ಸಂಸ್ಥೆಗಳನ್ನು ಮುಲಾಜಿಲ್ಲದೆ ಧಿಕ್ಕರಿಸಬೇಕು. ಹಾಗಿದ್ದರೆ ಮಾತ್ರ ಮಾತೃಭಾಷೆ ಉಳಿಯಲು ಸಾಧ್ಯ ಎಂದು 86ನೇ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ ಡಾ. ದೊಡ್ಡರಂಗೇಗೌಡ ಕರೆ ನೀಡಿದ್ದಾರೆ. ಇಂದಿನಿಂದ ಇಲ್ಲಿನ ಕನಕದಾಸ- ಶ ರೀಫ- ಸರ್ವಜ್ಞ ವೇದಿಕೆಯಲ್ಲಿ ಆರಂಭವಾದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕದೆಲ್ಲೆಡೆ ಕನ್ನಡದಲ್ಲೇ ಸೇವೆ ನೀಡುವಂತೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಬಲವಾಗಿ ಆಗ್ರಹಿಸಿದರೆ ಸಹಜವಾಗಿ ಉದ್ಯೋಗಗಳಲ್ಲಿ ಕನ್ನಡಿಗರ ಸಂಖ್ಯೆ […]

ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗಳಿಗೆ ಪಂಗನಾಮ ಹಾಕಿದ್ದ ಆರೋಪಿಗಳ ಬಂಧನ

ಬೆಂಗಳೂರು, ನ.23- ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಕಲಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ಕೋಟ್ಯಾಂತರ ರೂ. ಸಾಲ ಪಡೆದುಕೊಂಡು ಬ್ಯಾಂಕ್ಗಳಿಗೆ ವಂಚಿಸಿದ್ದ ಮೂವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರುಣ್ ರಾಜು ಕಾನಡೆ(30), ಸತ್ಯಾನಂದ ಅಲಿಯಾಸ್ ಸತ್ಯ(28) ಮತ್ತು ದತ್ತಾತ್ರೇಯ ಬಾಕಳೆ ಅಲಿಯಾಸ್ ಯಶ್(28) ಬಂಧಿತ ಆರೋಪಿಗಳು. ಕಳೆದ ಸೆಪ್ಟೆಂಬರ್ 23ರಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ವಿಜಯನಗರ ವ್ಯಾಪ್ತಿಯ ಬ್ಯಾಂಕ್ ಆಪ್ ಬರೋಡಾ ಶಾಖೆಗೆ ಸತ್ಯಾನಂದ ಮತ್ತು ಜಯಲಕ್ಷ್ಮೀ ಎಂಬುವರು ಸುಮಾರು 235.6 ಗ್ರಾಂ ನಕಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಬಂದಿದ್ದು ಜಯಲಕ್ಷ್ಮೀ […]

ಗುಜರಾತ್ ಚುನಾವಣೆ : ಬ್ಯಾಂಕ್ ವಹಿವಾಟುಗಳ ಮೇಲೆ ಹದ್ದಿನ ಕಣ್ಣು

ಅಹಮದಾಬಾದ್,ನ.6- ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಬ್ಯಾಂಕ್ ವಹಿವಾಟುಗಳ ಮೇಲೆ ಹದ್ದಿನ ಕಣ್ಣಿರಿಸಿದೆ. ಗುಜರಾತ್‍ನ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5ರಂದು ಚುನಾವಣೆ ನಿಗದಿಯಾಗಿದೆ. ಪ್ರತಿ ಕ್ಷೇತ್ರದ ಅಭ್ಯರ್ಥಿಯು ಪ್ರಚಾರಕ್ಕಾಗಿ 40 ಲಕ್ಷ ರೂ. ಸೀಮಿತವಾಗಿ ಖರ್ಚು ಮಾಡಬೇಕಿದೆ. ಇದಕ್ಕಾಗಿ ಪ್ರತ್ಯೇಕ ಖಾತೆ ತೆರೆಯಬೇಕು. 10 ಸಾವಿರ ರೂ.ಗಳ ಮೇಲ್ಪಟ್ಟ ಹಣದ ವಹಿವಾಟನ್ನು ಕಡ್ಡಾಯವಾಗಿ ಚೆಕ್, ಆರ್‍ಟಿಜಿಎಸ್ ಅಥವಾ ಡ್ರಾಫ್ಟ್‍ಗಳ ಮೂಲಕವೇ ನಿರ್ವಹಣೆ ಮಾಡಬೇಕು ಎಂಬುದು ಆರ್‍ಬಿಐನ ನಿಯಮವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ […]