ಫ್ಲೆಕ್ಸ,ಬ್ಯಾನರ್ ತೆರವು ಕಾರ್ಯಚರಣೆ ಖಾಸಗಿ ಸಂಸ್ಥೆಗಳ ಹೆಗಲಿಗೆ

ಬೆಂಗಳೂರು,ಮಾ.15- ಮಾಡೋ ಕೆಲ್ಸ ಬಿಟ್ಟು ಆಡೋ ದಾಸಯ್ಯನ ಹಿಂದೆ ಹೋದರೂ ಅನ್ನೊ ಹಾಗೇ ಬಿಬಿಎಂಪಿಯವರು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡೋಕೆ ಹೊಸ ಐಡಿಯಾ ಕಂಡುಕೊಂಡಿದ್ದಾರೆ.ತಾನು ಮಾಡಬೇಕಾದ ಕೆಲಸ ಮಾಡದೆ ಅದೇ ಕೆಲಸವನ್ನು ಖಾಸಗಿ ಸಂಸ್ಥೆ ಹೆಗಲಿಗೆ ವಹಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ನಗರದಲ್ಲಿ ಅನಧಿಕೃತವಾಗಿ ತಲೆ ಎತ್ತುತ್ತಿರುವ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಚರಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ನಗರದ ಸೌಂದರ್ಯ ಹಾಳು ಮಾಡಿ ಎಲ್ಲೇಂದರಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸುವವರ ವಿರುದ್ಧ ಕ್ರಿಮಿನಲ್ […]

ತೆಲಂಗಾಣದಲ್ಲಿ ಕರ್ನಾಟಕದ ವಿರುದ್ಧ ಆಕ್ಷೇಪಾರ್ಹ ಫಲಕ: ಸಿಎಂ ಬೊಮ್ಮಾಯಿ ಆಕ್ರೋಶ

ಬೆಂಗಳೂರು,ಸೆ.18- ಶೇಕಡಾ 40% ಸರ್ಕಾರಕ್ಕೆ ಸುಸ್ವಾಗತ ಎಂದು ಹೈದರಾಬಾದ್‍ನಲ್ಲಿ ಹಾಕಿದ್ದ ಆಕ್ಷೇಪಾರ್ಹ ಫಲಕಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿ ಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂತಹ ಘಟನೆಗಳಿಂದ ಎರಡೂ ರಾಜ್ಯಗಳ ನಡುವೆ ಸಂಬಂಧ ಹದಗೆಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ತೆಲಂಗಾಣದ ಭ್ರಷ್ಟಾಚಾರವನ್ನು ಕರ್ನಾಟಕದಲ್ಲಿ ಪ್ರಸ್ತಾಪಿಸಿದರೆ ಹೇಗಿರುತ್ತದೆ ಎಂದು ಅವರು ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರಿಗೂ ಎಚ್ಚರಿಕೆ ಕೊಟ್ಟರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ವ್ಯವಸ್ಥಿತ ಷಡ್ಯಂತ್ರ. ಇಂಥ ಬೆಳವಣಿಗೆಗಳಿಂದ ಕರ್ನಾಟಕ ಮತ್ತು ತೆಲಂಗಾಣ ನಡುವೆ ರಾಜಕೀಯ ಸಂಬಂಧಗಳು […]

BIG NEWS: ಶಿವಮೊಗ್ಗ ಬಳಿಕ ತುಮಕೂರಿನಲ್ಲೂ ಸಾವರ್ಕರ್ ಭಾವಚಿತ್ರ ಹರಿದ ಕಿಡಿಗೇಡಿಗಳು

ತುಮಕೂರು, ಆ.16- ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಹರಿದ ಬೆನ್ನಲ್ಲೇ ತುಮಕೂರು ನಗರದಲ್ಲಿಯೂ ವೀರ ಸಾವರ್ಕರ್ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ಎಂಪ್ರೆಸ್ ಶಾಲೆ ಮುಂಭಾಗ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್‍ ಅನ್ನು ಕಿಡಿಗೇಡಿಗಳು ತಡರಾತ್ರಿ ಹರಿದುಹಾಕಿದ್ದು, ನಗರದಲ್ಲಿ ಆತಂಕ ಮನೆ ಮಾಡಿದೆ. ವೀರ ಸಾವರ್ಕರ್ ಭಾವಚಿತ್ರ ಹರಿದಿರುವ ಬೆನ್ನಲ್ಲೇ ನಗರದಲ್ಲಿ ಶಾಂತಿ ಕದಡದಂತೆ ಕ್ರಮ ಕೈಗೊಳ್ಳಲು ಪೊಲೀಸರು ಆಯಕಟ್ಟಿನ ಪ್ರದೇಶಗಳ ಮೇಲೆ ನಿಗಾ ವಹಿಸಿದ್ದಾರೆ.