ಬಪ್ಪಿ ನಿಧನಕ್ಕೆ ಬಚ್ಚನ್ ಕಂಬನಿ

ಮುಂಬೈ,ಫೆ.17- ತಮ್ಮ ಚಿತ್ರಗಳಿಗೆ ಇಂಪಾದ ಗೀತೆಗಳನ್ನು ಸಂಯೋಜಿಸಿ ಜನಪ್ರಿಯಗೊಳಿಸಿದ ಬಪ್ಪಿ ಲಹಿರಿ ಅವರ ನಿಧನಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ನನ್ನ ಸಿನಿಮಾಗಳಿಗೆ ಬಪ್ಪಿ ಅವರು ನೀಡಿರುವ ಗೀತೆಗಳು ದಶಕಗಳಾಚೆಗೂ ಸಂತೋಷದಿಂದ ನೆನಪಿನಂಗಳದಲ್ಲಿರುತ್ತವೆ ಎಂದು ಅಮಿತಾಭ್ ಹೇಳಿದ್ದಾರೆ. ನಗರದ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದ 69 ವರ್ಷ ವಯಸ್ಸಿನ ಬಪ್ಪಿ ಲಹರಿ ಅವರು ನಮಕ್‍ಹಲಾಲ್ (1982) ಮತ್ತು ಶರಾಬಿ (1984) ಮೊದಲಾದ ಅಮಿತಾಭ್ ನಟನೆಯ ಚಿತ್ರಗಳಿಗೆ ಹಿಟ್ ಗೀತೆಗಳನ್ನು ನೀಡಿದ್ದರು. ಅವರ […]