ಹೆತ್ತವರ ಸೇವೆ ಮಾಡಿ ಎತ್ತರಕ್ಕೇರಿದ ಬಸವರಾಜ ಬೊಮ್ಮಾಯಿ

(ಜ.28 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ನಿಮಿತ್ಯ ವಿಶೇಷ ಲೇಖನ) ನೈತಿಕ ಮೌಲ್ಯಗಳು, ಬಡವರಪರ ಕಳಕಳಿ, ಕರ್ತವ್ಯಪರತೆ ಇವೆಲ್ಲವುಗಳ ಒಟ್ಟುಗೂಡಿದ ಮೂರ್ತರೂಪ ಬಸವರಾಜ ಬೊಮ್ಮಾಯಿ.ಅವರು ಇಂದು ನಾಡಿನ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿದ್ದರೂ ಸರಳತೆ,ಸ್ಪಂದನಶೀಲತೆಗೆ ಹೆಸರಾದವರು.ಕಷ್ಟದಲ್ಲಿರುವವರಿಗೆ ಮಿಡಿಯುವ ಗುಣ , ಅಭಿವೃದ್ಧಿ ಪರ ಚಿಂತನೆ ಮತ್ತು ಕಾರ್ಯಗಳು ಅವರ ವ್ಯಕ್ತಿತ್ವವೇ ಆಗಿವೆ. ಇಂತಹ ಉದಾತ್ತತೆ ಅವರಿಗೆ ತಂದೆ-ತಾಯಿಯವರಿಂದ ರಕ್ತಗತವಾಗಿಯೇ ಬಂದ ಬಳುವಳಿಯಾಗಿದೆ. ಬಸವರಾಜ ಬೊಮ್ಮಾಯಿಯವರು ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಅನರೋಗ್ಯಕ್ಕೀಡಾದ ತಮ್ಮ ಹೆತ್ತ […]