ಮೇಲ್ಮನೆಗೆ ಆಯ್ಕೆ ಪ್ರಕ್ರಿಯೆಗೆ ಸಭಾಪತಿ ಹೊರಟ್ಟಿ ಬೇಸರ

ಬೆಂಗಳೂರು,ಫೆ.12- ಬುದ್ದಿವಂತರ ಸದನವೆಂದೇ ಕರೆಯುವ ಕರ್ನಾಟಕದ ವಿಧಾನಪರಿಷತ್‍ಗೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು. ಒಂದು ಕಾಲದಲ್ಲಿ ದೇಶಕ್ಕೆ ಮಾದರಿಯಾದ ಕರ್ನಾಟಕ ವಿಧಾನಪರಿಷತ್‍ಗೆ ಅತ್ಯಂತ ಗೌರವಾನ್ವಿತ ಸದಸ್ಯರು ಆಯ್ಕೆಯಾಗಿ ಬರುತ್ತಿದ್ದರು. ಆದರೆ ಈಗ ಆಯ್ಕೆ ಪ್ರಕ್ರಿಯೆಯನ್ನು ನೋಡಿದರೆ ನಮಗೆ ಅತ್ಯಂತ ಬೇಸರವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಧಾನಪರಿಷತ್‍ಗೆ ಈ ಹಿಂದೆ ಡಿವಿಜಿ, ಸಿದ್ದಲಿಂಗಯ್ಯ, ಖಾದ್ರಿ ಶಾಮಣ್ಣ, ಎ.ಕೆ.ಸುಬ್ಬಯ್ಯ […]