ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅರೆಸ್ಟ್

ಚಿತ್ರದುರ್ಗ,ನ.10- ಮುರುಘಾಮಠದಲ್ಲಿ ಫೋಟೋಗಳ ಕಳವು ಪ್ರಕರಣ ಸಂಬಂಧ ಮಾಜಿ ಶಾಸಕ ಹಾಗೂ ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರನ್ನು ಗ್ರಾಮಾಂತರ ಠಾಣೆ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಕಳೆದ ಅ.6ರಂದು ರಾಜ್ಯಾಗಣದ ಗೋಡೆ ಮೇಲಿದ್ದ 47 ಫೋಟೋ ಕಳ್ಳತನ ಆಗಿವೆ ಎಂದು ಮುರುಘಾ ಮಠದ ಆಡಳಿತದ ಉಸ್ತುವಾರಿ ವಹಿಸಿರುವ ವಸ್ತ್ರಮಠದ್ ಅವರು ಗ್ರಾಮಾಂತರ ಫೋಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ.7ರಂದು ಪ್ರಕರಣದ ಇಬ್ಬರು ಅರೋಪಿಗಳಾದ ಹೊಸಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮೋಹನ […]