ಉಪ್ಪು ಹುಳಿ ಖಾರ ಇಲ್ಲದ ಬಜೆಟ್ : ಶರವಣ ಟೀಕೆ

ಬೆಂಗಳೂರು, ಫೆ.27- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಸರ್ಕಾರದ ನಿರ್ಗಮನದ ಸುಳಿವನ್ನು ಇಂದು ಮಂಡಿಸಿದ ಬಜೆಟ್ ನಲ್ಲಿ ನೀಡಿದ್ದಾರೆ ಎಂದು ವಿಧಾನ ಪರಿಷತ್ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಟಿ. ಎ.ಶರವಣ ಟೀಕಿಸಿದ್ದಾರೆ. ಉಳಿತಾಯ ಬಜೆಟ್ ಎಂದು ಹೇಳಿರುವ ಸರ್ಕಾರ ಕಳೆದ ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳಿಗೆ ಖರ್ಚು ಮಾಡಿರುವುದು ಸರಾಸರಿ ಶೇ. 56 ರಷ್ಟು ಮಾತ್ರ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ಕಾರ ಕಳೆದ ಬಜೆಟ್ ನಲ್ಲಿ ಘೋಷಿಸಿದ್ದನ್ನೇ ಜಾರಿ ಮಾಡಿಲ್ಲ. ಮಕ್ಕಳಿಗೆ ಸಮವಸ್ತ್ರ, […]

SC/ST ಸಮುದಾಯಕ್ಕೆ ಭರಪೂರ ಕೊಡುಗೆ

ಬೆಂಗಳೂರು,ಫೆ.17- ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಖರೀದಿಗೆ 50 ಸಾವಿರ ಸಹಾಯಧನದ ಜತೆಗೆ ಬಾಬು ಜಗಜೀವನ್ರಾಮ್ ಉದ್ಯೋಗ ಯೋಜನೆಯಡಿ ವಿದ್ಯುತ್ ತ್ರಿಚಕ್ರ ಅಥವಾ ನಾಲ್ಕು ಚಕ್ರದ ಸರಕು ವಾಹನಗಳನ್ನು ಖರೀದಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೂರು ಫಲಾನುಭವಿಗಳಂತೆ ಆಯ್ಕೆ ಮಾಡಿ ಶೇ.50ರಷ್ಟು (2 ಲಕ್ಷದವರೆಗೆ) ಸಹಾಯಧನ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಯವ್ಯಯದಲ್ಲಿ ಘೋಷಿಸಿದ್ದಾರೆ. ಇದಕ್ಕಾಗಿ 400 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು. ಕರ್ನಾಟಕ […]

ಶಾಲೆ ಬಿಟ್ಟವರಿಗಾಗಿ ಬದುಕುವ ದಾರಿ ಯೋಜನೆ

ಬೆಂಗಳೂರು,ಫೆ.17- ಶಿಕ್ಷಣ ಮುಂದುವರೆಸಲು ಸಾಧ್ಯವಾಗದಿರುವವರಿಗಾಗಿ ಐಟಿಐಗಳಲ್ಲಿ 3 ತಿಂಗಳ ಅವಯ ವೃತ್ತಿಪರ ಸರ್ಟಿಫಿಕೇಟ್ ಕೋರ್ಸ್ ಮಾಡಲು ಅನುಕೂಲವಾಗುವಂತೆ ಬದುಕುವ ದಾರಿ ಎಂಬ ಹೊಸ ಯೋಜನೆ ಆರಂಭಿಸಲು ನಿರ್ಧರಿಸಲಾಗಿದೆ. ಬದುಕುವ ದಾರಿ ಯೋಜನೆಯಡಿ ಐಟಿಐಗಳಲ್ಲಿ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಮಾಸಿಕ 1500 ರೂ.ಗಳ ಶಿಷ್ಯವೇತನ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಳಿಸಿದವರಿಗೆ 3 ತಿಂಗಳಿಗೆ 1500 ರೂ.ಗಳ ಶಿಶಿಕ್ಷು ಭತ್ಯೆ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಿಸಿದ್ದಾರೆ. ಪದವಿ ಶಿಕ್ಷಣ ಮುಗಿಸಿದ ಮೂರು ವರ್ಷಗಳ ನಂತರವೂ ಉದ್ಯೋಗ ದೊರೆಯದ ಯುವಕರು […]

ಸಾರಿಗೆ ನಿಗಮಗಳಿಗೆ 1200 ಹೊಸ ಬಸ್ ಖರೀದಿ

ಬೆಂಗಳೂರು,ಫೆ.17- ರಾಜ್ಯದ ಸಾರಿಗೆ ನಿಗಮಗಳಿಗೆ ಮುಂದಿನ ವರ್ಷ ಹೊಸದಾಗಿ 1200 ಬಸ್ಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, ಬಜೆಟ್ನಲ್ಲಿ 500 ಕೋಟಿ ರೂಪಾಯಿಗಳ ನೆರವು ಘೋಷಿಸಲಾಗಿದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ನಲ್ಲಿ ಸಾರಿಗೆ ನಿಗಮಗಳ ಪುನಶ್ಚೇತನದ ಚರ್ಚೆ ನಡೆಸಲಾಗಿದೆ. ಕಳೆದ ಸಾಲಿನಲ್ಲಿ 3,526 ಹೊಸ ಬಸ್ಗಳನ್ನು ಸೇರ್ಪಡೆ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ಮುಂದಿನ ವರ್ಷ 1200 ಹೊಸ ಬಸ್ಗಳನ್ನು ಖರೀದಿಸಲು 500 ಕೋಟಿ ರೂಪಾಯಿಗಳ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಸರ್ಕಾರ ಹೊಸ ಬಸ್ಗಳ […]

ಬೆಂಗಳೂರಿಗರಿಗೆ ಆರೋಗ್ಯದ ಕುರಿತು ಬಜೆಟ್‍ನಲ್ಲಿ ಗುಡ್ ನ್ಯೂಸ್

ಬೆಂಗಳೂರು,ಫೆ.17- ಮಹಾನಗರದ ಆರೋಗ್ಯ ಆಡಳಿತ ವ್ಯವಸ್ಥೆ ಸುಧಾರಿಸುವ ಉದ್ದೇಶದಿಂದ ಬೆಂಗಳೂರು ಹೆಲ್ತ್ ಸಿಸ್ಟಮ್ ಎಂಬ ವಿನೂತನ ಯೋಜನೆ ಜಾರಿಗೆ ಈ ಬಾರಿ ಬಜೆಟ್‍ನಲ್ಲಿ ಮುನ್ನುಡಿ ಬರೆಯಲಾಗಿದೆ. ನಗರದ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ದೊರಕಿಸಿಕೊಡಬೇಕು ಎನ್ನುವುದು ನಮ್ಮ ಸರ್ಕಾರದ ಆಧ್ಯತೆಯಾಗಿದ್ದು, ಹೀಗಾಗಿ ಎಲ್ಲ ಆಸ್ಪತ್ರೆಗಳ ನಡುವೆ ಸಮನ್ವಯ ಸಾಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಹೆಲ್ತ್ ಸಿಸ್ಟಮ್ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದ ಎಂದು ಅವರು ಮಾಹಿತಿ ನೀಡಿದ್ದಾರೆ. 2022-23ನೇ ಸಾಲಿನಲ್ಲಿ 243 ವಾರ್ಡ್‍ಗಳಲ್ಲಿ ನಮ್ಮ ಕ್ಲಿನಿಕ್‍ಗಳು […]

ಮಹಿಳಾ ಕಾರ್ಮಿಕರಿಗೆ ತಲಾ 500 ರೂ. ಸಹಾಯಧನ, ಉಚಿತ ಬಸ್ ಪಾಸ್

ಬೆಂಗಳೂರು,ಫೆ.17- ರಾಜ್ಯದ ಎಲ್ಲ ಮಹಿಳಾ ಕಾರ್ಮಿಕರಿಗೆ ತಲಾ 500 ರೂ. ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಮತ್ತೊಂದೆಡೆ ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ‘ ಈಗಾಗಲೇ ದೆಹಲಿ ಸೇರಿ ಕೆಲವು ರಾಜ್ಯಗಳಿದ್ದ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಇದ್ದ ಕೊಡುಗೆಗಳನ್ನು ರಾಜ್ಯದಲ್ಲಿಯೂ ಅಳವಡಿಕೆ ಮಾಡಲಾಗಿದೆ. ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ […]

ಬೊಮ್ಮಾಯಿ ಬಜೆಟ್‍ನಲ್ಲಿ ಮಹಿಳೆಯರಿಗೆ ಸಿಕ್ಕಿದ್ದೇನು..?

ಬೆಂಗಳೂರು,ಫೆ.17- ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಿರೀಕ್ಷೆಯಂತೆ ಸ್ತ್ರೀ ಸಬಲೀಕರಣಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಸಬಲೀಕರಣ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹೆಣ್ಣು ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗಾಗಿ ಆಕರ್ಷಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಜೆಟ್ ಮಂಡನೆ ಅನ್ವಯ ಒಂದು ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ನೀಡುವ ಬಗ್ಗೆ ಸಿಎಂ ಬೊಮ್ಮಾಯಿ ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಇದು ಮನೆಯಲ್ಲೇ ಇರುವ ಅನೇಕ ಗೃಹಿಣಿಯರು ಹಾಗೂ ಹೆಣ್ಣು ಮಕ್ಕಳಿಗೆ ಸಹಾಯ ಮಾಡಲಿದೆ. ಮಹಿಳಾ […]

ಬೊಮ್ಮಾಯಿ ಬಜೆಟ್ ಗಾತ್ರ ಎಷ್ಟು..? : ಇಲ್ಲಿದೆ ಆದಾಯ-ವೆಚ್ಚಗಳ ಮಾಹಿತಿ

ಬೆಂಗಳೂರು,ಫೆ.17- ರಾಜ್ಯ ಸಂಕಷ್ಟಮಯ ಪರಿಸ್ಥಿತಿಯಿಂದ ಹೊರ ಬಂದಿದ್ದು, ಹೆಚ್ಚುವರಿ ಕಂದಾಯ ಸಂಗ್ರಹ ಬಜೆಟ್ ಅನ್ನು ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಟ್ಟು ಗಾತ್ರವನ್ನು ಮೂರು ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದ್ದಾರೆ. ಒಟ್ಟು ಬಂಡವಾಳ ವೆಚ್ಚವನ್ನು 61 ಸಾವಿರ ಕೋಟಿ ರೂಪಾಯಿಗಳಿಗೆ ನಿಗದಿ ಮಾಡಿದ್ದಾರೆ. ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್‍ಗೆ ಹೆಚ್ಚಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗುರಿಗೆ ಪೂರಕವಾಗಿ ರಾಜ್ಯದ ಅರ್ಥಿಕತೆಯನ್ನು ಒಂದು ಟ್ರಿಲಿಯನ್‍ಗೆ ಹೆಚ್ಚಿಸುವ ಇಂಗಿತವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತ ಪಡಿಸಿದ್ದರು. ಅದಕ್ಕೆ […]

ರೈತರ ಅಲ್ಪಾವಧಿ ಸಾಲದ ಮಿತಿ 3 ರಿಂದ 5 ಲಕ್ಷಕ್ಕೆ ಏರಿಕೆ

ಬೆಂಗಳೂರು, ಫೆ.17- ನಾಡಿನ ಅನ್ನದಾತರಿಗೆ ಬಜೆಟ್‍ನಲ್ಲಿ ಬಂಪರ್ ಕೊಡುಗೆ ನೀಡಿದ್ದು, ಈ ವರ್ಷದಿಂದ ಬಡ್ಡಿರಹಿತ ಅಲ್ಪಾವ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೊಮ್ಮಾಯಿ ಬಜೆಟ್ – 2023-2024 (Live Updates) ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಅವರು, ರೈತರ ಆರ್ಥಿಕ ಸದೃಢತೆಗಾಗಿ ಹಾಗೂ ಕೃಷಿ ಚಟುವಟಿಕೆಗಳ ಉತ್ತೇಜನಕ್ಕಾಗಿ ಅಲ್ಪಾವ ಸಾಲದ ಮೊತ್ತವನ್ನು ಹೆಚ್ಚಿಸಿದ್ದು, ಇದರಿಂದ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ರೈತರಿಗೆ ಸುಲಭವಾಗಿ […]

ಬೊಮ್ಮಾಯಿ ಬಜೆಟ್ – 2023-2024 (Live Updates)

ಬೆಂಗಳೂರು,ಫೆ.17-ನಾಡಿನ ರೈತರಿಗೆ ನೀಡುತ್ತಿದ್ದ ಅಲ್ಪಾವ ಸಾಲದ ಮಿತಿಯನ್ನು 3ರಿಂದ 5 ಲಕ್ಷದವರೆಗೆ ಏರಿಕೆ. ಸಣ್ಣ ಮತ್ತು ಅತಿ ಸಣ್ಣ ಕುಟುಂಬಗಳಿಗೆ ಜೀವನ್ ಜ್ಯೋತಿ ವಿಮಾ, ರೈತರ ಬೆಳೆ ಖರೀದಿಸಲು ಬೆಂಬಲ ಬೆಲೆ ಅನುದಾನ ಹೆಚ್ಚಳ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರ ಮಾಸಿಕ ಗೌರವ ಧನ ಹೆಚ್ಚಳ, ಮುಖ್ಯಮಂತ್ರಿಗಳ ವಿದ್ಯಾಶಕ್ತಿ, ಹೊಸ ಪಬ್ಲಿಕ್ ಶಾಲೆ ನಿರ್ಮಾಣ… ಆಡಳಿತಾರೂಡ ಬಿಜೆಪಿ ಸರ್ಕಾರದ ಕೊನೆಯ ಹಾಗೂ ಪ್ರಸಕ್ತ 2023-24ನೇ ಸಾಲಿನ ಬಜೆಟ್‍ನಲ್ಲಿ ರಾಜ್ಯದ ಜನತೆಗೆ ಬರಪೂರ ಕೊಡುಗೆಗಳನ್ನು […]