ವಾಹನ ಕಳ್ಳರ ಬಂಧನ : 4.30 ಲಕ್ಷ ಮೌಲ್ಯದ ವಾಹನಗಳ ವಶ

ಬೆಂಗಳೂರು, ಮಾ.5- ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಬ್ಯಾಟರಾಯನ ಪೊಲೀಸರು 4.30 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಜೆಜೆಆರ್ ನಗರದ ಗೋರಿಪಾಳ್ಯ, ಸಂಗಮ್ ವೃತ್ತದ ಬಳಿಯ ನಿವಾಸಿ ಮಜೀದ್ ಪಾಷಾ(21) ಬಂಧಿತ ಆರೋಪಿ.ಈತನ ಬಂಧನದಿಂದ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 5 ದ್ವಿಚಕ್ರ ವಾಹನಗಳು ಪತ್ತೆಯಾಗಿದೆ. ಇದಲ್ಲದೆ ಶಿವಾಜಿನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಕೂಡ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದೇಶದಲ್ಲಿ ಭಾರತದ ಘನತೆಗೆ ಧಕ್ಕೆ ತಂದಿದ್ದು ಪ್ರಧಾನಿ ಮೋದಿ : […]