ಮಹಾ ಮಳೆಗೆ ನಲುಗಿದ ಬೆಂಗಳೂರು, ಕೊಚ್ಚಿಹೋದ ವಾಹನಗಳು

ಬೆಂಗಳೂರು,ಅ.20- ನಿನ್ನೆ ಸುರಿದ ಮಹಾಮಳೆಗೆ ಐಟಿ ಬಿಟಿ ಸಿಟಿ ತತ್ತರಿಸಿ ಹೋಗಿದೆ. ಮಳೆರಾಯನ ಅಬ್ಬರಕ್ಕೆ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತಗೊಂಡಿದ್ದರೆ, ಅಂಡರ್‍ ಪಾಸ್‍ಗಳಲ್ಲಿ ಆಳುದ್ದ ನೀರು ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಶಿವಾಜಿನಗರ, ಮಂತ್ರಿಮಾಲ್ ಮುಂಭಾಗ, ಜಯನಗರದ ಸೌತ್ ಎಂಡ್ ಸರ್ಕಲ, ಓಕಳಿಪುರ ಸೇರಿದಂತೆ ನಗರದ ವಿವಿಧೆಡೆ ಇರುವ ಅಂಡರ್ ಪಾಸ್‍ಗಳಲ್ಲಿ ಆಳುದ್ದ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿತ್ತು. ಕನ್ನಡ ರಾಜ್ಯೋತ್ಸವದಂದು ಅಪ್ಪುಗೆ ಕರ್ನಾಟಕ ರತ್ನ ಪ್ರದಾನ ದೊಮ್ಮಲೂರು, ರಾಜಾಜಿನಗರ ಮತ್ತಿತರ […]

ಜಪಾನ್‌ಗೆ ಅಪ್ಪಳಿಸಿದ ಚಂಡಮಾರುತ, ಜನಜೀವನ ಅಸ್ತವ್ಯಸ್ತ

ಟೊಕಿಯೋ, ಸೆ.19: ಜಪಾನ್‍ಗೆ ನೆನ್ಮಡೋಲ್ ಚಂಡಮಾರುತ ಅಪ್ಪಳಿಸಿದ್ದು, ಕ್ಯುಶು ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ಹಲವು ಮನೆಗಳು ನಾಶಗೊಂಡಿದ್ದು, ವಾಹನಗಳು ನೀರಿನಲ್ಲಿ ಮುಳುಗಿ ಹಲವು ಅವಾಂತರಗಳು ಸಂಭವಿಸಿದೆ.ಇಂದು ಮುಂಜಾನೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಇನ್ನು ಕೆಲವರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಾಹಣಾ ಅಧಿಕಾರಿ ಯೋಶಿಹರು ಮೇಡಾ ಅವರು ಹೇಳಿದ್ದಾರೆ. ಸುಮಾರು 162 ಕಿ.ಲೋಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದ್ದು, ಈಗಾಗಲೇ ಸುಮಾರು ಹಲವಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ನೈರುತ್ಯ ಜಪಾನ್ […]

ಮುಂದುವರೆದ ವರುಣನ ಅಬ್ಬರ, ನೆಲೆ ಕಳೆದುಕೊಂಡ ಮಂದಿ

ಬೆಂಗಳೂರು,ಆ.8- ರಾಜ್ಯದ ಹಲವೆಡೆ ಮಳೆ ಮುಂದುವರಿದಿದ್ದು, ಮಳೆ ಹಾನಿಯಿಂದಾಗಿ ಈವರೆಗೂ 74 ಮಂದಿ ಸಾವನ್ನಪ್ಪಿದ್ದಾರೆ. ಜೂನ್ ಆರಂಭದಲ್ಲಿ ಮುಂಗಾರು ಪ್ರಾರಂಭವಾ ದಾಗಿನಿಂದ, 74 ಜನರು ಪ್ರಾಣ ಕಳೆದುಕೊಂಡಿದ್ದಾರೆ, 36 ಜನರು ಗಾಯಗೊಂಡಿದ್ದಾರೆ ಮತ್ತು 1.38 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಕೆಟ್ಟದಾಗಿ ಹಾನಿಗೊಳಗಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 14 ಜಿಲ್ಲೆಗಳಲ್ಲಿ 161 ಗ್ರಾಮಗಳಲ್ಲಿ 21,727 ಜನರು ತೊಂದರೆಗೀಡಾಗಿದ್ದು, 8,197 ಜನರನ್ನು ಸ್ಥಳಾಂತರಿಸಲಾಗಿದೆ. ಒಟ್ಟು 7,386 ಜನರು 36 ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. 11,768 ಕಿಮೀ ರಸ್ತೆಗಳು ಮತ್ತು […]