ಬಿಬಿಎಂಪಿಯ 198 ವಾರ್ಡ್‍ಗಳನ್ನು 243 ವಾರ್ಡ್‍ಗಳಾಗಿ ಪರಿವರ್ತಿಸಿರುವ ಕರಡು ಪ್ರತಿ ಸಿದ್ದ

ಬೆಂಗಳೂರು,ಜ.19-ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯ 198 ವಾರ್ಡ್‍ಗಳನ್ನು 243 ವಾರ್ಡ್‍ಗಳಾಗಿ ಪರಿವರ್ತಿಸಿರುವ ಕರಡು ಪ್ರತಿ ಸಿದ್ದವಾಗಿದೆ.ಈ ಹಿಂದೆ ನಿಗಪಡಿಸಿದಂತೆ ಬಿಬಿಎಂಪಿ ಹೊರ ವಲಯದ ಒಂದು ಕಿ.ಮೀ.ವ್ಯಾಪ್ತಿಯನ್ನು ಸೇರಿಸಿಕೊಳ್ಳದೆ ಬೇರಳೇಣಿಕೆ ಗ್ರಾಮಗಳನ್ನು ಮಾತ್ರ ಬಿಬಿಎಂಪಿಗೆ ಸೇರ್ಪಡೆ ಮಾಡಿಕೊಂಡು 243 ವಾರ್ಡ್‍ಗಳನ್ನು ಸಿದ್ದಪಡಿಸಲಾಗಿದೆ. 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪರಿವರ್ತಿಸಿದ ನಂತರ ಚುನಾವಣೆ ನಡೆಸಲಾಗುವುದು ಎಂದು ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿತ್ತು.ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಬಿಎಂಪಿ ಮಾಜಿ ಸದಸ್ಯರಾದ ಅಬ್ದುಲ್ ವಾಜೀದ್ ಮತ್ತು ಎಂ.ಶಿವರಾಜು ಅವರು […]