ಬಿಬಿಎಂಪಿಯವರು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದ್ದಾರೆ : ಹೈಕೋರ್ಟ್ ಗರಂ

ಬೆಂಗಳೂರು,ಮಾ.5- ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಕಸ ವಿಲೇವಾರಿಗೆ ನಿರ್ಬಂಧ ವಿಧಿಸಿದ್ದರೂ ಪದೇ ಪದೇ ಆದೇಶ ಉಲ್ಲಂಘಿಸಿರುವ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಮುಖ್ಯ ಆಯುಕ್ತರನ್ನು ಜೈಲಿಗೆ ಕಳುಹಿ ಸುತ್ತೇವೆ ಎಂಬ ಎಚ್ಚರಿಕೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ, ಬಿಬಿಎಂಪಿ ಆಯುಕ್ತರ ನಿರ್ಲಕ್ಷ್ಯ ಧೋರಣೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಹೈಕೋರ್ಟ್ ಆದೇಶ ಎಂದರೆ ಏನು ಎಂಬುದನ್ನು ಅರ್ಥ ಮಾಡಿಸುತ್ತೇವೆ. ಆಯುಕ್ತರನ್ನು ಜೈಲಿಗೆ ಕಳುಹಿಸುತ್ತೇವೆ. ಕಾನೂನು ಎಂದರೆ ಏನು […]

ಶೇ.100ರಷ್ಟು ಪಲ್ಸ್ ಪೋಲಿಯೋ ಯಶಸ್ಸಿಗೆ ಕರೆ

ಬೆಂಗಳೂರು, ಫೆ.25- ಈ ಬಾರಿಯೂ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಶೇ.100ರಷ್ಟು ಯಶಸ್ಸಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ನೆರೆ ರಾಷ್ಟ್ರಗಳಲ್ಲಿ ಪಲ್ಸ್ ಪೋಲಿಯೋ ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ನಮ್ಮ ದೇಶದಲ್ಲೂ ಇದೇ 27ರಿಂದ ಮಾ.3ರ ವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ನೂರರಷ್ಟು ಯಶಸ್ಸಿಗೆ ನಾವು ಸಿದ್ಧರಾಗಿದ್ದು, ಸಾರ್ವಜನಿಕ ಆರೋಗ್ಯ ಇಲಾಖೆ ಯೋಜನೆಯಡಿ 141 ಯೋಜನಾ ಘಟಕಗಳಲ್ಲಿ 3400 […]

ಬಿಬಿಎಂಪಿ ಬಜೆಟ್ ಪ್ರಕ್ರಿಯೆ ಆರಂಭ: ಗೌರವ್ ಗುಪ್ತ

ಬೆಂಗಳೂರು,ಫೆ.4- ಬಿಬಿಎಂಪಿಗೆ ಬಜೆಟ್ ರೂಪಿಸುವ ಬಗ್ಗೆ ಚಟುವಟಿಕೆಗಳನ್ನು ಆರಂಭಿಸುತ್ತೇವೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ  ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಇರುವ ಆದಾಯದ ಮೂಲಗಳು ಹಾಗೂ ರಾಜ್ಯ ಸರ್ಕಾರದಿಂದ ಬರುವ ಆದಾಯದ ಮೂಲಗಳನ್ನು ಅಂದಾಜಿಸಿ ಬಿಬಿಎಂಪಿ ಬಜೆಟ್ ರೂಪಿಸುವ ಚಟುವಟಿಕೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು. ನಗರದ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದನ್ನು ಬಜೆಟ್ನಲ್ಲಿ ಅಳವಡಿಸಲಾಗುವುದು. ಪ್ರತಿ ದಿನದ ಪಾಲಿಕೆಯ ನಿರ್ವಹಣೆಗೆ ಎಷ್ಟು ವೆಚ್ಚ ತಗಲುತ್ತದೆ. ಹಾಗೆಯೇ […]

ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿಲ್ಲ

ಬೆಂಗಳೂರು, ಜ.24- ಕೊರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವಕ್ಕೂ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದ್ದು, ಉಳಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗಣರಾಜ್ಯೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಇಂದಿಲ್ಲಿ ತಿಳಿಸಿದರು. ಗಣರಾಜ್ಯೋತ್ಸವ ಆಚರಿಸಲಾಗುವ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೇಡ್ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 60 ಸಿಸಿ ಕ್ಯಾಮೆರಾ ವ್ಯವಸ್ಥೆ, ಎರಡು ಬ್ಯಾಗೇಜ್ ಸ್ಕ್ಯಾನರ್ […]

ಹೋಂ ಐಸೋಲೇಷನ್ ಪೂರ್ಣಗೊಳಿಸಿದವರಿಗೆ ಸರ್ಟಿಫಿಕೇಟ್ ನೀಡಲ್ಲ ; ಗೌರವ್ ಗುಪ್ತ

ಬೆಂಗಳೂರು,ಜ.24- ಕೊರೊನಾ ಸೋಂಕು ಕಾಣಿಸಿಕೊಂಡು ಹೋಂ ಐಸೋಲೇಷನ್‍ನಲ್ಲಿದ್ದು ಗುಣಮುಖರಾದವರಿಗೆ ಯಾವುದೆ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಸಿಟಿವ್ ಕಾಣಿಸಿಕೊಂಡವರು ತಮ್ಮ ರಿಪೋರ್ಟ್ ಬಂದ ನಂತರ 7 ದಿನಗಳ ಕಾಲ ಹೋಂ ಐಸೋಲೇಷನ್‍ನಲ್ಲಿ ಇರಬೇಕು. ಒಂದು ವೇಳೆ 7 ದಿನಗಳ ನಂತರವೂ ರೋಗ ಲಕ್ಷಣ ಇದ್ದರೆ ಮತ್ತಷ್ಟು ದಿನಗಳ ಕಾಲ ಐಸೋಲೇಷನ್‍ನಲ್ಲಿ ಇರಬೇಕಾಗುತ್ತದೆ ಎಂದರು. 7 ದಿನಗಳ ಒಳಗೆ ಸೋಂಕು ಮಾಯವಾಗಿದ್ದರೆ ಅದು ಆಟೋ ಡಿಸ್ಚಾರ್ಜ್ […]

ಲಾಕ್‍ಡೌನ್ ಜಾರಿ ಬಗ್ಗೆ ಚರ್ಚೆಯಾಗಿಲ್ಲ : ಗೌರವ್‍ಗುಪ್ತಾ

ಬೆಂಗಳೂರು,ಜ.12-ನಗರದಲ್ಲಿ ಸೋಂಕು ಉಲ್ಬಣಗೊಳ್ಳುತ್ತಿದೆ ಆದರೂ ಲಾಕ್‍ಡೌನ್ ಜಾರಿ ಬಗ್ಗೆ ಯಾವುದೆ ಚರ್ಚೆ ನಡೆದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು 15 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಭವಿಷ್ಯದಲ್ಲಿ ಸೋಂಕು ಮತ್ತಷ್ಟು ಹೆಚ್ಚುವುದು ಖಚಿತ. ಸೋಂಕು ಹರಡುವಿಕೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಲಾಕ್‍ಡೌನ್ ಜಾರಿ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಸೋಂಕು ಹರಡದಂತೆ ನೋಡಿಕೊಳ್ಳಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ […]

ಈ ಹಿಂದೆ ಪಡೆದ ಲಸಿಕೆಯನ್ನೇ ಬೂಸ್ಟರ್ ಡೋಸ್ ಆಗಿ ನೀಡಲಾಗುವುದು : ಗೌರವ್ ಗುಪ್ತಾ

ಬೆಂಗಳೂರು,ಜ.10-ಈ ಹಿಂದೆ ಪಡೆದ ಲಸಿಕೆಯನ್ನೇ ಬೂಸ್ಟರ್ ಡೋಸ್ ಆಗಿ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೆ ಹಾಗೂ ಎರಡನೆ ಡೋಸ್ ನೀಡಿಕೆ ಸಂದರ್ಭದಲ್ಲಿ ಆಯೋಜಿಸಿದ್ದ ಶಿಬಿರಗಳ ಮಾದರಿಯಲ್ಲೇ ಬೂಸ್ಟರ್ ಡೋಸ್ ನೀಡಿಕೆಗೂ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಅವರು ವಿವರಣೆ ನೀಡಿದರು. ನಗರದಲ್ಲಿ ಶಿಬಿರಗಳನ್ನು ಆಯೋಜಿಸಿ 60 ವರ್ಷ ಮೇಲ್ಪಟ್ಟ ಹಿರಿಯರು, ಅದರಲ್ಲೂ ಕೊಮರ್ಬಿಟಿಸ್‍ನಿಂದ ನರಳುತ್ತಿರುವವವರಿಗೆ ಆಧ್ಯತೆ ಮೇಲೆ ಬೂಸ್ಟರ್ ಲಸಿಕೆ ಹಾಕಲಾಗುವುದು. ನಂತರ ಹೆಲ್ತ್‍ಕೇರ್ ಸಿಬ್ಬಂದಿಗಳು […]