ಬಿಬಿಎಂಪಿ ನೌಕರರ ಸಂಘದ 2 ಬಣಗಳ ನಡುವಿನ ಗುದ್ದಾಟಕ್ಕೆ ಹೊಸ ಟ್ವಿಸ್ಟ್

ಬೆಂಗಳೂರು,ಜ.14- ಬಿಬಿಎಂಪಿ ಅಧಿಕಾರಿಗಳ ಸಂಘದ ಎರಡು ಬಣಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಗ್ರಾಮಗಳ ದಿನಗೂಲಿ ನೌಕರರರನ್ನು ಖಾಯಂಗೊಳಿಸಲು 3 ಲಕ್ಷ ಲಂಚ ಕೇಳಲಾಗುತ್ತಿದೆ ಎಂದು ನಿನ್ನೆ ವೈರಲ್ ಆದ ಆಡಿಯೋ ಬಿಬಿಎಂಪಿಯಲ್ಲಿ ಸಂಚಲನ ಸೃಷ್ಟಿಸಿದೆ. ದಿನಗೂಲಿ ನೌಕರರರನ್ನು ಖಾಯಂ ಮಾಡಬೇಕಾದರೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‍ರಾಜ್ ಮತ್ತು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ದಯಾನಂದ್ ಅವರಿಗೆ ಲಂಚ ನೀಡಬೇಕು ಎಂಬ ಬಗ್ಗೆ ಇಬ್ಬರು ವ್ಯಕ್ತಿಗಳ […]