ಅನಧಿಕೃತವಾಗಿ ಫ್ಲೆಕ್ಸ್-ಬ್ಯಾನರ್ ಅಳವಡಿಸಿದರೆ ಬೀಳುತ್ತೆ ಎಫ್‍ಐಆರ್

ಬೆಂಗಳೂರು,ಫೆ.23- ನಗರದಲ್ಲಿ ಇನ್ನು ಮುಂದೆ ಫ್ಲೆಕ್ಸ್,ಬ್ಯಾನರ್‍ಗಳನ್ನು ಅನಧಿಕೃತವಾಗಿ ಹಾಕಿದರೆ ಬೀಳುತ್ತೆ ಎಫ್‍ಐಆರ್. ಎಂಟು ವಲಯಗಳಲ್ಲಿ ಯಾವುದೇ ಪ್ರದೇಶದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಧಿಕೃತ ಫ್ಲೆಕ್ಸ್, ಬ್ಯಾನರ್‍ಗಳನ್ನು ಎಂತಹ ಪ್ರಭಾವಿ ವ್ಯಕ್ತಿಗಳೆ ಹಾಕಿದರೂ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. ಸಾರ್ವಜನಿಕರು ತಮ್ಮ ಕಣ್ಣಿಗೆ ಬೀಳುವ ಅನಧಿಕೃತ ಫ್ಲೆಕ್ಸ್‍ಗಳ ಬಗ್ಗೆ ಆಯಾ […]