ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಗೆಯಲು ಅನುಮತಿ ಕಡ್ಡಾಯ : ಸಿಎಂ ಬೊಮ್ಮಾಯಿ

ಬೆಂಗಳೂರು,ಫೆ.15- ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಮುಂದೆ ರಸ್ತೆ ಅಗೆಯುವಾಗ ಕೇಬಲ್ ಕಂಪನಿಯವರು ಕಡ್ಡಾಯವಾಗಿ ಅನುಮತಿ ಪಡೆದೆ ಕಾಮಗಾರಿಯನ್ನು ಆರಂಭಿಸಲು ನಿಯಮಾವಳಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಾಂಗ್ರೆಸ್ ಸದಸ್ಯ ಭೈರತಿ ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಖಾಸಗಿ ಟೆಲಿಕಾಂ ಸಂಸ್ಥೆಗಳು ಒಎಸ್‍ಸಿ ಕೇಬಲ್ ಅಳವಡಿಸುವ ವೇಳೆ ಬಿಡಬ್ಲ್ಯುಎಸ್‍ಎಸ್‍ಬಿ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಈ ಸಂಬಂಧ ನಿಯಮಾವಳಿಗಳನ್ನು ಜಾರಿ ಮಾಡುವುದಾಗಿ ಹೇಳಿದರು. ರಸ್ತೆಗಳನ್ನು ಅಗೆಯುವ ಮುನ್ನ ಟೆಲಿಕಾಂ ಕಂಪನಿಯವರು […]