BDA ಸೈಟ್ ದೋಖಾ : ಉಪ ಕಾರ್ಯದರ್ಶಿಗಳು, ಸೇರಿದಂತೆ ಅಧಿಕಾರಿಗಳ ಮೇಲೆ FIR

ಬೆಂಗಳೂರು,ಜ.25-ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ನೂರಾರು ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಕಬಳಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬೃಹತ್ ಕರ್ಮಕಾಂಡವನ್ನು ಬಯಲಿಗೆ ಎಳೆದಿರುವ ವಿಶೇಷ ಕಾರ್ಯಪಡೆ, ಬಿಡಿಎ ಅಧಿಕಾರಿಗಳು ಸೇರಿದಂತೆ ಹತ್ತಾರು ಆರೋಪಿಗಳ ವಿರುದ್ಧ 18 ಪ್ರಕರಣಗಳನ್ನು ದಾಖಲಿಸಿದೆ. ಕಳೆದ ಹತ್ತು ದಿನಗಳಿಂದ ನಿರಂತರವಾಗಿ ದಾಖಲಾತಿಯನ್ನು ಪರಿಶೀಲಿಸಿ ಕರ್ಮಕಾಂಡವನ್ನು ಪತ್ತೆಹಚ್ಚಲಾಗಿದ್ದು, ದಾಖಲಾತಿಗಳನ್ನು ಆಧರಿಸಿ ವಿಶೇಷ ಕಾರ್ಯಪಡೆ ಮತ್ತು ಜಾಗೃತ ದಳದ ಅಧಿಕಾರಿಗಳು ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಇದರಲ್ಲಿ ಉಪಕಾರ್ಯದರ್ಶಿಗಳಾದ ಅನಿಲ್‍ಕುಮಾರ್, ಎಸ್.ಎ.ಮಂಗಳ ಅವರ ಹೆಸರುಗಳು […]