ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ

ಬೆಂಗಳೂರು, ಮಾ. 17- ಕಳೆದ ಎರಡು ದಿನಗಳಿಂದ ರಾಜ್ಯದ ಒಳನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪೂರ್ವ ಮುಂಗಾರು ಮಳೆಯಾಗಿದೆ. ಕೆಲವೆಡೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾದ ವರದಿಯಾಗಿದೆ. ಬುಧವಾರ ರಾತ್ರಿ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡ ಮಳೆಯಾದ ವರದಿಯಾಗಿತ್ತು. ನಿನ್ನೆ ಸಂಜೆ ಹಾಗೂ ರಾತ್ರಿ ಕೂಡ ಮಳೆ […]

ಶ್ರೀಲಂಕಾಕ್ಕೆ 2 ವಿಕೆಟ್‍ಗಳ ಸೋಲು : ಟೆಸ್ಟ್ ಫೈನಲ್‍ಗೇರಿದ ಭಾರತ

ಕ್ರಿಸ್ಟ್‍ಚರ್ಚ್, ಮಾ. 13- ನ್ಯೂಜಿಲೆಂಡ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡವು 2 ವಿಕೆಟ್‍ಗಳ ಸೋಲು ಕಾಣುವ ಮೂಲಕ ಐಸಿಸಿ ಆಯೋಜನೆಯ 2ನೇ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್‍ಗೇರುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ. ಶ್ರೀಲಂಕಾದ ಈ ಸೋಲಿನಿಂದಾಗಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಫಲಿತಾಂಶಕ್ಕೆ ಕಾಯದೆಯೇ ಫೈನಲ್‍ಪಂದ್ಯದ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2 ಟೆಸ್ಟ್‍ಗಳಲ್ಲೂ ಶ್ರೀಲಂಕಾ ಕ್ಲೀನ್ ಸ್ವೀಪ್ ಮಾಡಿದ್ದರೆ ಆಗ ಫೈನಲ್‍ನಲ್ಲಿ ಆಡುವ ಅವಕಾಶ ಪಡೆಯಬಹುದಿತ್ತು. ಟೆಸ್ಟ್ ಸ್ವರೂಪದ ನಂಬರ್ 1 ತಂಡವಾಗಿರುವ ಆಸ್ಟ್ರೇಲಿಯಾ […]

ತವರಿನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಅಸಾಧ್ಯ : ರಮೀಜ್ ರಾಜಾ

ನವದೆಹಲಿ, ಫೆ. 20- ತವರು ಅಂಗಳದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಭಾರತ ಬಲಿಷ್ಠವಾಗಿದ್ದು, ಆ ತಂಡವನ್ನು ಸೋಲಿಸುವುದು ಅತ್ಯಂತ ಕಠಿಣ ಕೆಲಸ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಅವರು ಶ್ಲಾಘಿಸಿದ್ದಾರೆ. ಐಸಿಸಿ ಆಯೋಜನೆಯ 2ನೇ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಗವಾಗಿ ನಡೆಯುತ್ತಿರುವ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಪಡೆ ಆಸ್ಟ್ರೇಲಿಯಾ ವಿರುದ್ಧ 2-0 ಯಿಂದ ಸರಣಿಯಲ್ಲಿ ಮುನ್ನಡೆ ಪಡೆದಿರುವ ಬೆನ್ನಲ್ಲೇ ಪಾಕ್ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಟೀಮ್ […]

ದೆಹಲಿಯ ಪಾಲಿಕೆ ಸಭೆಯಲ್ಲಿ ತಳ್ಳಾಟ-ನೂಕಾಟ, ಗುದ್ದಾಟ

ನವದೆಹಲಿ,ಜ.6- ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗಾಗಿ ಇಂದು ನಡೆದ ಪ್ರಥಮ ಸಭೆಯಲ್ಲಿ ಅಮ್‍ಆದ್ಮಿ ಮತ್ತು ಬಿಜೆಪಿ ಸದಸ್ಯರ ನಡುವೆ ತಳ್ಳಾಟ ನೂಕಾಟ ನಡೆದಿದ್ದು, ಸಭೆಯನ್ನು ಮುಂದೂಡಿಕೆಯಾಗಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಮ್‍ಆದ್ಮಿ ಪಕ್ಷ 134 ಸ್ಥಾನಗಳಲ್ಲಿ ಗೆದ್ದು ಬಹುಮತ ಪಡೆದಿದೆ. ಮೇಯರ್ ಆಯ್ಕೆಗೆ ಇಂದು ಚುನಾವಣೆ ನಿಗದಿಯಾಗಿತ್ತು. ಶೇಲ್ಲಿ ಒಬೆರಾಯ್ ಮತ್ತು ಆಶುಥಾಕೂರ್ ಅವರನ್ನು ಮೇಯರ್ ಸ್ಥಾನಕ್ಕೆ ಹೆಸರು ಸೂಚಿಸಲಾಗಿತ್ತು. ರೇಖಾ ಗುಪ್ತಾ ಬಿಜೆಪಿ ಅಭ್ಯರ್ಥಿಯಾಗಿದ್ದರು. ಉಪಮೇಯರ್ ಸ್ಥಾನಕ್ಕೆ ಅಮ್‍ಆದ್ಮಿ ಪಕ್ಷ ಮೊಹಮ್ಮದ್ ಇಕ್ಬಾಲ್ ಮತ್ತು […]

ಆಸ್ಟ್ರೇಲಿಯಾ ಮಣಿಸಿ ಕ್ವಾರ್ಟರ್‌ಫೈನಲ್‍ಗೆ ಲಗ್ಗೆ ಇಟ್ಟ ಅರ್ಜೆಂಟೀನಾ

ಅಲ್ ರಯಾನ್ (ಕತಾರ್), ಡಿ. 4 -ಲಿಯೋನೆಲ್ ಮೆಸ್ಸಿ ಅವರ ಅದ್ಬುತ ಆಟದಿಂದ ಆಸ್ಟ್ರೇಲಿಯಾ ವಿರುದ್ಧ 2-1 ಗೋಲುಗಳ ಜಯದೊಂದಿಗೆ ಅರ್ಜೆಂಟೀನಾ ಕ್ವಾರ್ಟರ್‍ಫೈನಲ್‍ಗೆ ಲಗ್ಗೆ ಇಟ್ಟಿದೆ. ಇಲ್ಲಿ ನಡೆಯುತ್ತರುವ ವಿಶ್ವಕಪ್ ಪುಟ್‍ಬಾಲ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುಧ್ದದ ಪ್ರಮುಖ ಪಂದ್ಯದಲ್ಲಿ ಮೆಸ್ಸಿ ಆಕರ್ಷಕ ಹೊಡೆತದ ಮೂಲಕ ಚಂಡನ್ನು ಗೋಲನ ಬಲೆಯೊಳಗೆ ಬೀಳಿಸುವ ಮೂಲಕ ತಮ್ಮ ವೃತ್ತಿಪರ ಆಟ 1,000 ನೇ ಗೋಲು ದಾಖಲಿಸಿದರು ಕಳೆದ ರಾತ್ರಿ ನಡೆದ ರೊಮಾಂಚಕಾರಿ ಪಂದ್ಯ 34 ನೇ ನಿಮಿಷದಲ್ಲಿ ಮೆಸ್ಸಿ ಅರ್ಜೆಂಟೀನಾಕ್ಕೆ ಮುನ್ನಡೆ […]

ಅಮಾನುಷವಾಗಿ ಥಳಿಸಿದ ಉಪನ್ಯಾಸಕ, ಪ್ರಜ್ಞೆ ತಪ್ಪಿದ ವಿದ್ಯಾರ್ಥಿ

ತುಮಕೂರು,ಡಿ.2- ಉಪನ್ಯಾಸಕರೊಬ್ಬರು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದು ಆತ ಪ್ರಜ್ಞೆಹೀನ ಸ್ಥಿತಿಗೆ ತಲುಪಿದ ಪ್ರಕರಣ ತುಮಕೂರಿನ ದೇವರಾಯನದುರ್ಗದಲ್ಲಿರುವ ನವೋದಯ ಶಾಲೆಯಲ್ಲಿ ನಡೆದಿದೆ. ಉಪನ್ಯಾಸಕರ ಹೊಡೆತಕ್ಕೆ ವಿದ್ಯಾರ್ಥಿ ಪ್ರಜ್ಞೆ ತಪ್ಪಿದ್ದು, ಕೆಲ ಕಾಲ ಸಂಸ್ಥೆಯ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತುಮಕೂರು ತಾಲ್ಲೂಕು ಹೆಬ್ಬೂರು ಭಾಗದ ವಿದ್ಯಾರ್ಥಿಗೆ ಉಪನ್ಯಾಸಕರು ಥಳಿಸಿರುವುದು ಗೋತ್ತಾಗಿದೆ. ಪೋಷಕರು ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದು, ಉಪನ್ಯಾಸಕರ ವಿರುದ್ಧ ವಾರದ ಒಳಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರಾಂಶುಪಾಲರಿಗೆ ಮುತ್ತಿಗೆ ಹಾಕಿ ಎಚ್ಚರಿಕೆ ನೀಡಿದ್ದಾರೆ. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ […]

ಸತತ 4 ಎಸೆತಗಳಲ್ಲಿ 4 ವಿಕೆಟ್ ಢಮಾರ್, ಆಸ್ಟ್ರೇಲಿಯಾ ಆಲ್ ಔಟ್, ಭಾರತಕ್ಕೆ ಭರ್ಜರಿ ಜಯ

ಬ್ರಿಸ್‍ಬೇನ್, ಅ. 17- ವಿಕೆಟ್, ವಿಕೆಟ್, ವಿಕೆಟ್, ವಿಕೆಟ್ ಇದು ಇಂದು ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆದ ಅಂತಿಮ ಓವರ್‍ನ ಮ್ಯಾಜಿಕ್. ಭಾರತ ನೀಡಿದ 187 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಕೊನೆಯ ಓವರ್‍ನವರೆಗೂ ಗೆಲುವಿನ ಹೊಸ್ತಿಲಲ್ಲೇ ಇತ್ತಾದರೂ, ಪಂದ್ಯದ ಕೊನೆಯ ಓವರ್‍ನಲ್ಲಿ ಸ್ಟ್ಯಾಂಡ್ ಬೈ ಆಟಗಾರನ ರೂಪದಲ್ಲಿ ಬಂದ ಮೊಹಮ್ಮದ್ ಶಮಿ ಅವರು ಮಾಡಿದ ಬೌಲಿಂಗ್ ಜಾದೂವಿನಿಂದಾಗಿ ರೋಹಿತ್ ಪಡೆಯು 6 ವಿಕೆಟ್‍ಗಳ ರೋಚಕ ಗೆಲುವು ಸಾಧಿಸಿತು. 20ನೆ ಓವರ್‍ನ ಮೊದಲೆರಡು ಎಸೆತಗಳಲ್ಲಿ […]

ಏಷ್ಯಾಕಪ್ ಫೈನಲ್‍ಗೇರಿದ ಭಾರತ ವನಿತೆಯರು

ಸಿಲ್ಹೆಟ್, ಏ. 13- ಭಾರತ ತಂಡದ ಭರವಸೆಯ ಆಟಗಾರ್ತಿ ಶೆಫಾಲಿ ವರ್ಮಾ ( 42 ರನ್, 1 ವಿಕೆಟ್) ರ ಹೋರಾಟದ ಫಲದಿಂದಾಗಿ ಏಷ್ಯಾ ಕಪ್‍ನ ಮೊದಲ ಸೆಮಿಫೈನಲ್‍ನಲ್ಲಿ 74 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಹರ್ಮನ್‍ಪ್ರೀತ್ ಕೌರ್ ಪಡೆ ಫೈನಲ್‍ಗೆ ಪ್ರವೇಶಿಸಿದೆ. ಟಾಸ್ ಗೆದ್ದರೂ ಎದುರಾಳಿ ಪಡೆಯನ್ನು ಬ್ಯಾಟಿಂಗ್‍ಗೆ ಆಮಂತ್ರಿಸಿದ ಥೈಯ್ಲಾಂಡ್‍ನ ನಾಯಕಿ ನೂರೆಮೋಲ್ ಚಾಯ್‍ವಾಲ್ ಅವರ ನಿರ್ಣಯ ತಪ್ಪು ಎಂಬುದನ್ನು ಮಹಿಳಾ ಬ್ಯಾಟರ್‍ಗಳು ಆರಂಭದಲ್ಲಿ ತೋರಿಸಿದರು.ಭಾರತದ ಪರ ಆರಂಭಿಕ ಆಟಗಾರ್ತಿಯರಾಗಿ ಕ್ರೀಸ್ಗೆ ಇಳಿದ […]