7 ಬಿಡಿಎ ನಿವೇಶನಗಳನ್ನು ನುಂಗಿದರೇ ನಿರ್ಮಾಪಕ ಉಮಾಪತಿ..?

ಬೆಂಗಳೂರು,ಜ.19- ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ವಿರುದ್ಧ ಕೋಟ್ಯಂತರ ರೂ.ಬೆಲೆ ಬಾಳುವ ಬಿಡಿಎ ನಿವೇಶನ ವಂಚಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ಕೋಟ್ಯಂತರ ರೂ.ಬೆಲೆಬಾಳುವ 7 ನಿವೇಶನಗಳನ್ನು ಉಮಾಪತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸ್ವತಃ ಬಿಡಿಎ ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಎಳ್ಳುಕುಂಟೆ ಗ್ರಾಮದ ಸರ್ವೆ ನಂ 11 ರಲ್ಲಿರುವ ಹೆಚ್‍ಎಸ್‍ಆರ್ ಲೇಔಟ್‍ನ 3ನೇ ಸೆಕ್ಟರ್‍ನಲ್ಲಿರುವ 6್ಡ080 ವಿಸ್ತೀರ್ಣದ 685,686,687,688,689,690,691 ನಂಬರಿನ ಬಿಡಿಎ ನಿವೇಶನಗಳನ್ನು ಉಮಾಪತಿ ಒತ್ತುವರಿ ಮಾಡಿಕೊಂಡಿರುವ […]