ನಾಳೆ ಚಂದ್ರನ ಹಿಂದೆ ಕಣ್ಮರೆಯಾಗಲಿದೆ ಯುರೇನಸ್ ಗ್ರಹ

ವಾಷಿಂಗ್ಟನ್,ಜ.27- ನಾಳೆ ಬಾಹ್ಯಾಕಾಶದಲ್ಲೊಂದು ಸೋಜಿಗ ನಡೆಯಲಿದೆ. ದೂರದರ್ಶಕದ ಮೂಲಕ ಗೋಚರಿಸುವ ಯುರೇನಸ್ ಗ್ರಹ ನಾಳೆ ಚಂದ್ರನ ಹಿಂದೆ ಕಣ್ಮರೆಯಾಗುವುದೆಂದು ನಾಸಾ ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ನಾಳೆ ರಾತ್ರಿ 10.28 ರಿಂದ ಭಾನುವಾರದ ಬೆಳಗಿನ ಜಾವ 3.28ರವರೆಗೆ ನಡೆಯುವ ಈ ಸೋಜಿಗವನ್ನು ಪ್ರಪಂಚದ ಉತ್ತರ ಭಾಗದ ಜನರು ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ವೀಕ್ಷಿಸಬಹುದಾಗಿದೆ. ಅಲಾಸ್ಕಾ, ಕೆನಡಾದ ದೂರದ ಉತ್ತರ, ಗ್ರೀನ್‍ಲ್ಯಾಂಡ್, ರಷ್ಯಾ ಮತ್ತು ಜಪಾನ್‍ನ ಪ್ರದೇಶಗಳಲ್ಲಿ ಈ ಚಮತ್ಕಾರ ಗೋಚರಿಸುತ್ತದೆ ಎಂದು ಔಟ್‍ಲೆಟ್ ವರದಿ ಮಾಡಿದೆ. ಹೆಂಡತಿ […]

ಚಳಿಯಲ್ಲೂ ರಾಹುಲ್‍ ಟೀ ಶರ್ಟ್ ಧರಿಸೋದೇಕೆ..? ಇದರ ಹಿಂದಿದೆ ಮನಕಲಕುವ ಕಥೆ

ಚಂಡೀಗಢ,ಜ.10-ಹರಿದ ಬಟ್ಟೆಯಲ್ಲಿದ್ದ ಮೂವರು ಬಡ ಹೆಣ್ಣು ಮಕ್ಕಳನ್ನು ಕಂಡ ನಂತರ ನಾನು ಚಳಿಯಲ್ಲೂ ಟೀ ಶರ್ಟ್ ಧರಿಸಲು ಕಾರಣ ಎಂದು ರಾಹುಲ್‍ಗಾಂಧಿ ಬಹಿರಂಗಪಡಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯುದ್ದಕ್ಕೂ ಅವರು ಟೀ ಶರ್ಟ್ ಧರಿಸಿ ಗಮನ ಸೆಳೆದಿದ್ದರು. ಯಾತ್ರೆ ಮೈ ಕೊರೆಯುವ ಉತ್ತರಭಾರತಕ್ಕೆ ಆಗಮಿಸಿದಾಗಲೂ ಅವರು ಟೀ ಶರ್ಟ್ ಬಿಟ್ಟು ಬೇರೆ ಬಟ್ಟೆ ಧರಿಸಿರಲಿಲ್ಲ. ಇದನ್ನು ಕಂಡ ಮಾಧ್ಯಮದವರು ನೀವು ಮೈ ಕೊರೆಯುವ ಚಳಿಯಲ್ಲೂ ಟೀ ಶರ್ಟ್ ಧರಿಸಲು ಕಾರಣವೇನು ಎಂದಾಗ ಅವರು ಸತ್ಯ ಬಾಯ್ಬಿಟ್ಟಿದ್ದಾರೆ. ಕೇರಳದಲ್ಲಿ ಒಂದು […]