ಸಮಾಜಮುಖಿ ಪತ್ರಕರ್ತ ಸಮೀವುಲ್ಲಾ

ಬೆಂಗಳೂರು,ಮಾ.18- ಕರ್ನಾಟಕ ಏಕೀಕರಣದ ಹುತಾತ್ಮರಾದ ರಂಜಾನ್ ಸಾಬ್ ಹೆಸರಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮ ನಡೆಸಲು ಒಂದು ಲಕ್ಷ ರೂ. ನೀಡುವುದಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಪ್ರಕಟಿಸಿದರು. ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ವತಿಯಿಂದ ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲಾ ಅವರಿಗೆ ಶ್ರೀ ರಂಜಾನ್ ಸಾಬ್ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ರಂಜಾನ್ ಸಾಬ್ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಈ ಹಣ ನೀಡಲಾಗುವುದು ಎಂದರು. […]