ಬೆಂಗಳೂರಿನ ಮತ್ತೊಂದು ಫ್ಲೈಓವರ್‌ನಲ್ಲಿ ಬಿರುಕು, ವಾಹನ ಸವಾರರಲ್ಲಿ ಆತಂಕ..!

ಬೆಂಗಳೂರು, ಫೆ.19- ತುಮಕೂರು ರಸ್ತೆ ಫ್ಲೈ ಓವರ್ ಕಳಪೆ ಕಾಮಗಾರಿಯಿಂದ ಶಿಥಿಲಗೊಂಡು ದುರಸ್ತಿಯಾಗುತ್ತಿರುವ ಬೆನ್ನಲ್ಲೇ ಗೊರಗುಂಟೆಪಾಳ್ಯ ಬಳಿಯ ಎಂಇಎಸ್ ಫ್ಲೈ ಓವರ್‍ನಲ್ಲಿ ಬೇರಿಂಗ್ ಬಿರುಕು ಕಾಣಿಸಿಕೊಂಡಿದೆ. ಕಳೆದ ಐದು ವರ್ಷಗಳ ಹಿಂದಷ್ಟೇ ನಿರ್ಮಿಸಿರುವ ಈ ಮೇಲ್ಸೇತುವೆ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸವಾರರಲ್ಲಿ ಆತಂಕ ಎದುರಾಗಿದೆ. 2017ರಲ್ಲಿ ರೈಲ್ವೆ ಇಲಾಖೆಯಿಂದ ಎಂಇಎಸ್ ಫ್ಲೈ ಓವರ್ ನಿರ್ಮಿಸಲಾಗಿತ್ತು. 2020ರಲ್ಲಿ ನಿರ್ವಹಣೆಗೆಂದು ಸೇತುವೆಯನ್ನು ಬಿಬಿಎಂಪಿಗೆ ರೈಲ್ವೆ ಇಲಾಖೆ ಹಸ್ತಾಂತರಿಸಿತ್ತು. 2021ರಲ್ಲಿ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಬೇರಿಂಗ್ […]