ಮೈಸೂರು-ಚನೈ ವಂದೇ ಭಾರತ ಎಕ್ಸಪ್ರೆಸ್ ರೈಲಿನ ಮೇಲೆ ಕಲ್ಲೆಸೆತ

ಬೆಂಗಳೂರು,ಫೆ.26- ಇತ್ತೀಚಿಗೆ ಆರಂಭಗೊಂಡಿದ್ದ ಮೈಸೂರು-ಚನೈ ನಡುವಿನ ವಂದೇ ಭಾರತ ಎಕ್ಸಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿರುವ ಘಟನೆ ಕೆ ಆರ್‍ಪುರಂ ನಮೀಪ ನಡೆದಿದೆ. ಕಳೆದ ರಾತ್ರಿ ಈ ಘಟನೆಯಲ್ಲಿ ರೈಲಿನ ಬೋಗಿಯೊಂದರ ಗಾಜಗಳಿಗೆ ಹಾನಿಯಾಗಿದ್ದು, ಪ್ರಯಾಣಿಕರು ಕೂಡ ಗಾಯಗೊಂಡಿದ್ದಾರೆ ಎಂದು ನೈಋತ್ಯ ರೈಲೆ ಇಲಾಖೆ ಅಕಾರಿಗಳು ತಿಳಿಸಿದ್ದಾರೆ. ಸದ್ಯ ಕಿಡಿಗೇಡಿಗಳಿಗಾಗಿ ರೇಲ್ವೆ ಪೆÇಲೀಸರು ಬಲೆ ಬೀಸಿದ್ದಾರೆ. ವರುಗಳ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿ ಶಿಕ್ಷೆಗೆ ಒಳಪಡಿಸಲಾಗು ವುದು ಎಂದು ಎಚ್ಚರಿಕೆ ನೀಡಿದೆ. ಇನ್ನು ಕಳೆದ […]

ಬಿಬಿಎಂಪಿ ವ್ಯಾಪ್ತಿಯಲ್ಲಿ ಫೆ.27 ರಿಂದ ಖಾತಾ ಆಂದೋಲನ

ಬೆಂಗಳೂರು,ಫೆ.24- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಲ್ಲಿರುವ ಎಲ್ಲಾ ಸ್ವತ್ತುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಹಾಗೂ ಈ ಸಂಬಂಧ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಫೆ.27 ರಿಂದ ಖಾತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಎಂದು ವಿಶೇಷ ಆಯುಕ್ತ(ಕಂದಾಯ)ರಾದ ಡಾ. ಆರ್.ಎಲ್ ದೀಪಕ್ ತಿಳಿಸಿದ್ದಾರೆ. ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಬಿಎಂಪಿ ಎಲ್ಲಾ ವಲಯಗಳಲ್ಲಿರುವ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗುತ್ತಿದ್ದು ಅದು ಬೆಳಗ್ಗೆ 11:00 ರಿಂದ ಸಂಜೆ 4:00 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಸ್ವತ್ತಿನ […]

ಕೊತ ಕೊತ ಕುದಿಯಲಿದೆ ಕರ್ನಾಟಕ, ಹವಾಮಾನ ತಜ್ಞರ ಮುನ್ಸೂಚನೆ..!

ಬೆಂಗಳೂರು,ಫೆ.24-ಕರ್ನಾಟಕದಲ್ಲಿ ಅವಗೂ ಮೊದಲೇ ಬೇಸಿಗೆ ಕಾಲಿಡಲಿದ್ದು, ತಾಪಮಾನ ದಿಢೀರ್ ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.ಚಳಿಗಾಲದ ಅಂತ್ಯದ ನಡುವೆಯೇ ರಾಜ್ಯಕ್ಕೆ ಬೇಸಿಗೆ ಝಳ ಕಾಲಿಟ್ಟಿದ್ದು, ಅವಗೂ ಮೊದಲೇ ರಾಜ್ಯದಲ್ಲಿ ಬೇಸಿಗೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದೆ. ರಾಜ್ಯದಲ್ಲಿ ಸಾಮಾನ್ಯ ಮಾರ್ಚ್ 1ರ ಬದಲಿಗೆ ಫೆಬ್ರವರಿ 24ರಿಂದಲೇ ಬೇಸಿಗೆ ಆರಂಭವಾಗಲಿದ್ದು, ತಾಪಮಾನ ದಿಢೀರ್ ಏರಿಕೆ ಕಾಣಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯೊಂದಿಗೆ ಶುಷ್ಕ ಹವಾಮಾನದ ಮುನ್ಸೂಚನೆ ನೀಡಿದೆ. […]

ಮನೆಮುಂದೆ ನಿಲ್ಲಿಸಿದ್ದ ಕಾರುಗಳ ಮೇಲೆ ಕಲ್ಲು ತೂರಿದ ಪುಂಡರು

ಬೆಂಗಳೂರು,ಫೆ.24- ಬೈಕ್ ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಮನೆಮುಂದೆ ನಿಲ್ಲಿಸಿದ್ದ 6 ಕ್ಕೂ ಹೆಚ್ಚು ಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಹನುಮಂತನಗರ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಮುಂಜಾನೆ 3 ಗಂಟೆ ಸುಮಾರಿನಲ್ಲಿ ಶ್ರೀನಿವಾಸನಗರದಲ್ಲಿ ನಡೆದ ಈ ಘಟನೆ ನಡೆದಿದ್ದು ಕಲ್ಲೇಟಿನಿಂದ ಕೆಲ ಕಾರುಗಳ ಗಜುಗಳು ಪುಡಿ ಪುಡಿಯಾಗಿದೆ. ಮದ್ಯದ ಮತ್ತಿನಲ್ಲಿ ಕಿಡಿಗೇಡಿಗಳು ಕಾರಿನ ಗ್ಲಾಸ್ ಗೆ ಕಲ್ಲುತೂರಿ ಪುಂಡಾಟ ನಡೆಸಿ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿದೆ. ಘಟನಾ ಸ್ಥಳಕ್ಕೆ […]

ನೀರಿನ ಸೋರಿಕೆ ತಡೆಗಟ್ಟಲು ಜಾಗೃತದಳ ರಚನೆ : ಸಿಎಂ ಬೊಮ್ಮಾಯಿ

ಬೆಂಗಳೂರು,ಫೆ.16- ನಗರದಲ್ಲಿ ನೀರಿನ ಕಳ್ಳತನ, ಅಕ್ರಮ ಸಂಪರ್ಕ ಮತ್ತು ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆ ಗಟ್ಟಲು ಜಾ ಗೃತ ದಳ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ವಿಧಾನ ಪರಿಷತ್ನ ಪ್ರಶ್ನೋತ್ತರ ಅವಯಲ್ಲಿ ಸದಸ್ಯೆ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಬೆಂಗಳೂರು ಜಲಮಂಡಳಿ ಕಾವೇರಿ ಒಂದರಿಂದ ನಾಲ್ಕನೇ ಹಂತದವರೆಗೆ 1450 ದಶಲಕ್ಷ ಲೀಟರ್ ಪೂರೈಕೆ ಮಾಡುತ್ತಿದೆ. ಕಾವೇರಿ ನೀರಿನ ಸಂಗ್ರಹಣೆ,ಸರಬರಾಜಿಗೆ ಮುನ್ನ ಜಲ ಶುದ್ಧೀಕರಣ ಘಟಕದಲ್ಲಿ ರಾಸಾಯನಿಕ ಬಳಕೆ, ವಿದ್ಯುತ್ ಶುಲ್ಕ, ಬಂಡವಾಳ ವೆಚ್ಚ ಹಾಗೂ ನೌಕರರ […]

ಫೆ.22ರಂದು ನಂದಿಬೆಟ್ಟದ ತಪ್ಪಲಿನಲ್ಲಿ G-20 ಸಭೆ

ಬೆಂಗಳೂರು,ಫೆ.16- ಜಿ20 ರಾಷ್ಟ್ರಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಮುಖ್ಯಸ್ಥರುಗಳ ಸಭೆ ಮುಂದಿನ ವಾರ ಬೆಂಗಳೂರು ಸಮೀಪದ ನಂದಿ ಬೆಟ್ಟದಲ್ಲಿ ನಡೆಯಲಿದೆ. ಫೆ.22 ರಿಂದ 25ರವರೆಗೆ ನಡೆಯಲಿರುವ ಈ ಸಭೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಸಾಲದ ತೊಂದರೆಗಳು, ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣ ಮತ್ತು ಜಾಗತಿಕ ಮಂದಗತಿ ಕುರಿತಂತೆ ಚರ್ಚೆ ನಡೆಸಲಾಗುವುದು. ಈ ಸಭೆಯ ನಂತರ ಮಾ.1 ಮತ್ತು 2 ರಂದು ನವದೆಹಲಿಯಲ್ಲಿ ವಿದೇಶಾಂಗ ಸಚಿವರುಗಳ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ಜಾಗತಿಕ ಸಾಲದ ವೆಚ್ಚಗಳು ಹೆಚ್ಚಾಗುತ್ತಿದ್ದಂತೆ, ಭಾರತ, […]

ಗಳಿಕೆ ರಜೆ ನಗದೀಕರಣ ಯೋಜನೆಗೆ ಬಿಬಿಎಂಪಿ ಎಳ್ಳು-ನೀರು, ನೌಕರರ ಆಕ್ರೋಶ

ಬೆಂಗಳೂರು,ಫೆ.15- ಅಧಿಕಾರಿ ಮತ್ತು ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ ಜಾರಿಗೆ ಬಿಬಿಎಂಪಿ ಆಡಳಿತ ಮೀನಾಮೇಷ ಎಣಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಸರ್ಕಾರಿ ನೌಕರರು ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಆಯಾ ವರ್ಷದ ಜ.1ರಿಂದ ಪ್ರಾರಂಭಗೊಂಡಂತೆ ಡಿ.31 ರವರೆಗೆ 155 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಆದ್ಯರ್ಪಿಸಿ ಮತ್ತೆ ರಜೆ ವೇತನಕ್ಕೆ ನಗದೀಕರಣ ಸೌಲಭ್ಯ ಪಡೆಯಬಹುದಾಗಿದೆ. ಸರ್ಕಾರ ಹಾಗೂ ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೃಂದದ ಅಕಾರಿ ಮತ್ತು ನೌಕರರು ಒಂದು ತಿಂಗಳ ಮುಂಚಿತವಾಗಿ ನೋಟಿಸ್ ನೀಡಿ ಜ.1 […]

ಬೇಸಿಗೆ ಆರಂಭಕ್ಕೂ ಮುನ್ನವೆ ಬೆಂಗಳೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಬೆಂಗಳೂರು,ಫೆ.13- ಬೇಸಿಗೆ ಆರಂಭಕ್ಕೂ ಮುನ್ನವೆ ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಗಿಲುಮುಟ್ಟಿದೆ.ಬಿಸಿಲು ಏರಿಕೆಯಾಗುತ್ತಿರುವಂತೆ ನಗರದಲ್ಲಿರುವ ಕೊಳವೆಬಾವಿಗಳು ಒಂದೊಂದೆ ಬತ್ತಲು ಶುರುವಾಗಿರುವುದರಿಂದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ನೀರಿನ ದಾಹ ನೀಗಿಸುವ ಕೊಳವೆಬಾವಿಗಳು ಬೇಸಿಗೆ ಆರಂಭದಲ್ಲೇ ಬತ್ತಿರೋದ್ರಿಂದ ನಗರದಲ್ಲಿ ಜಲಗಂಡಾಂತರ ಭೀತಿ ಶುರುವಾಗಿದೆ.ಬೇಸಿಗೆ ಮುನ್ನ ಜಲಮಂಡಳಿ ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ನಗರದಲ್ಲಿ ಜಲಕ್ಷಾಮ ಎದುರಾಗುವುದು ಗ್ಯಾರಂಟಿ ಎನ್ನುವಂತಾಗಿದೆ. ಬೇಸಿಗೆ ಮುನ್ನವೇ ನಗರದಲ್ಲಿರುವ 644ಕ್ಕೂ ಹೆಚ್ಚು ಬೋರ್ ವೆಲ್‍ಗಳು ಬತ್ತಿ ಹೋಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೋರ್‍ವೆಲ್‍ಗಳು ಬತ್ತಿಹೋಗುವ […]

75ನೇ ಸೇನಾ ದಿನ : ಬೆಂಗಳೂರಲ್ಲಿ ಮೈನವಿರೇಳಿಸಿದ ಸೈನಿಕರ ಶಕ್ತಿ ಪ್ರದರ್ಶನ

ಬೆಂಗಳೂರು,ಜ.15- ಭಾರತೀಯ ಸೇನೆಯ 75ನೇ ಸೇನಾ ದಿನದ ಪ್ರಯುಕ್ತ ನಗರದಲ್ಲಿ ವೀರಯೋಧರ ದೇಶಭಕ್ತಿ ವಿಜೃಂಭಿಸಿದೆ.ರಾಷ್ಟ್ರ ರಾಜಧಾನಿಯ ಹೊರಗೆ ಇದೇ ಮೊದಲ ಭಾರಿಗೆ ಮಹತ್ವದ ಕಾರ್ಯಕ್ರಮ ನಡೆಯುತ್ತಿದ್ದು ಸಂಕ್ರಾಂತಿ ಹಬ್ಬದ ಸಡಗರದ ನಡುವೆ ಮೈನವಿರೇಳಿಸುವ ಫಥಸಂಚಲನ ನಡೆದಿದ್ದು ಬೆಂಗಳೂರಿನ ಜನರು ಪುಳಕಿತಗೊಂಡಿದ್ದಾರೆ. ಹಲಸೂರು ಬಳಿಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‍ನ ಯುದ್ಧ ಸ್ಮಾರಕಕ್ಕೆ ಸೇನೆಯ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆ ಬೆಳಿಗ್ಗೆ ಗೌರವ ನಮನ ಸಲ್ಲಿಸುವ ಮೂಲಕ ಸೇನಾ ದಿನ ಆಚರಣೆ ಶುರುವಾಯಿತು.ನಂತರ ಸೇನೆಯ 8 ಕಂಟಿಂಜೆಂಟïಗಳು ನಡೆಸಿಕೊಡಲಿರುವ ಪರೇಡ್‍ಯನ್ನು […]

ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್..!

ಚಿಕ್ಕಬಳ್ಳಾಪುರ,ಡಿ.17-ಜನತೆಗೆ ಹೊಸ ವರ್ಷದ ಕೊಡುಗೆಯಾಗಿ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ವಿಸ್ತರಣೆಯಾಗಲಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಬಿಎಂಟಿಸಿ ಬಸ್ ಜನವರಿ ಮೊದಲ ವಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೂ ಆಗಮಿಸಲಿದೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಜನವರಿ ಮೊದಲ ವಾರದಲ್ಲಿ ಬಿಎಂಟಿಸಿ ಬಸ್ ವಿಸ್ತರಣೆ ಆಗುವ ಬಗ್ಗೆ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಜನತೆಗೆ ಬಹುನಿರೀಕ್ಷಿತ ಬೇಡಿಕೆಯಾಗಿದ್ದ ಬಿಎಂಟಿಸಿ ಬಸ್ಸುಗಳನ್ನ ಹೊಸ ವರ್ಷ ಜನವರಿ ಮೊದಲ ವಾರದಲ್ಲಿ ಚಿಕ್ಕಬಳ್ಳಾಪುರಕ್ಕೂ ವಿಸ್ತರಿಸಲಾಗುವುದು ತನ್ನ ಕಾರ್ಯ […]